ADVERTISEMENT

ಅಫ್ಗಾನಿಸ್ತಾನ ತೆಕ್ಕೆಗೆ ಬಗ್ರಾಮ್ ವಾಯುನೆಲೆ ಹಸ್ತಾಂತರಿಸಿದ ಅಮೆರಿಕ

ಏಜೆನ್ಸೀಸ್
Published 2 ಜುಲೈ 2021, 11:25 IST
Last Updated 2 ಜುಲೈ 2021, 11:25 IST
ಸುಮಾರು 20 ವರ್ಷದ ಬಳಿಕ ಅಫ್ಗಾನಿಸ್ತಾನಕ್ಕೆ ಬಗ್ರಾಮ್ ವಾಯುನೆಲೆ ಮರಳಿ ದೊರೆತಿದೆ.
ಸುಮಾರು 20 ವರ್ಷದ ಬಳಿಕ ಅಫ್ಗಾನಿಸ್ತಾನಕ್ಕೆ ಬಗ್ರಾಮ್ ವಾಯುನೆಲೆ ಮರಳಿ ದೊರೆತಿದೆ.   

ಕಾಬೂಲ್: ಬಗ್ರಾಮ್ ವಾಯುನೆಲೆಯನ್ನು ಅಮೆರಿಕ ಇಪ್ಪತ್ತು ವರ್ಷಗಳ ಬಳಿಕ ಅಫ್ಗಾನಿಸ್ತಾನಕ್ಕೆ ಹಸ್ತಾಂತರಿಸಿದೆ.

ತಾಲಿಬಾನ್ ವಿರುದ್ಧದ ಸಂಘರ್ಷ ಕೊನೆಗೊಂಡ ಬಳಿಕ ಅಫ್ಘಾನಿಸ್ತಾನದಲ್ಲಿಯೇ ನೆಲೆಯೂರಿದ್ದ ಅಮೆರಿಕದ ಪಡೆಗಳು ಹಂತಹಂತವಾಗಿ ಸ್ವದೇಶಕ್ಕೆ ವಾಪಸ್ ತೆರಳುತ್ತಿದ್ದು, ಈ ಪ್ರಕ್ರಿಯೆಗೆ ಪೂರಕವಾಗಿ ವಾಯುನೆಲೆಯನ್ನು ವಾಪಸ್ ಮಾಡಲಾಗುತ್ತಿದೆ.

ಅಮೆರಿಕದ ಮಿಲಿಟರಿ ಪಡೆಗಳ ನಿರ್ಗಮನ ಮತ್ತು ಅಲ್ಲಿಂದ ಸಲಕರಣೆಗಳನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಅದು ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸೆಪ್ಟೆಂಬರ್‌ 11ರ ಒಳಗಾಗಿ ಅಫ್ಗಾನಿಸ್ತಾನ ತೊರೆದು ಬರಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗಡುವು ವಿಧಿಸಿದ್ದಾರೆ. ಹೀಗಾಗಿ ಈ ಅವಧಿಯ ಒಳಗಾಗಿ ಭದ್ರತಾ ಪಡೆಗಳು ಅಮೆರಿಕಾಗೆ ವಾಪಸ್ ತೆರಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.