ಪ್ಯಾರಿಸ್: ಕಾರು ಚಾಲನೆ ಮಾಡುತ್ತಿದ್ದ 17 ವರ್ಷದ ಯುವಕನನ್ನು ಪೊಲೀಸ್ ಅಧಿಕಾರಿಗಳು ಟ್ರಾಫಿಕ್‌ನಲ್ಲಿ ತಪಾಸಣೆ ವೇಳೆ ಗುಂಡಿಟ್ಟು ಕೊಂದ ಘಟನೆ ಖಂಡಿಸಿ ಮೃತ ಯುವಕನ ಕುಟುಂಬ ಶನಿವಾರ ಕರೆ ನೀಡಿದ್ದ ಪ್ರತಿಭಟನಾ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ.
ಈ ಕುರಿತು ಪ್ಯಾರಿಸ್ ಪೊಲೀಸ್ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ನೀಡಿದ್ದು, ‘ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ‘ದ ಲಾ ರಿಪಬ್ಲಿಕ್’ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಿದೆ.
‘ಕಾನೂನು ಜಾರಿ ಸೇರಿದಂತೆ ಜನಾಂಗೀಯ ತಾರತಮ್ಯವನ್ನು ಪರಿಹರಿಸಲು ಫ್ರಾನ್ಸ್ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿ (ಸಿಇಆರ್‌ಡಿ) ಶುಕ್ರವಾರ ಹೇಳಿತ್ತು.
ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ದೇಶದ ಕಾನೂನು ಜಾರಿ ಸಂಸ್ಥೆಗಳಲ್ಲಿ ಸಾಂಸ್ಥಿಕ ವರ್ಣಭೇದ ನೀತಿಯನ್ನು ನಿರಾಕರಿಸಿದ್ದಾರೆ.
ಸಿಇಆರ್‌ಡಿಯ ಆರೋಪವನ್ನು ಫ್ರಾನ್ಸ್‌ನ ವಿದೇಶಾಂಗ ಸಚಿವಾಲಯ ಶನಿವಾರ ಅಲ್ಲಗಳೆದಿದ್ದು, ‘ಕಾನೂನು ಜಾರಿ ಸಂಸ್ಥೆಗಳಲ್ಲಿ ಯಾವುದೇ ರೀತಿಯ ವ್ಯವಸ್ಥಿತ ಜನಾಂಗೀಯ ತಾರತಮ್ಯ ನಡೆದಿದೆ ಎಂಬ ಆರೋಪ ಕಂಡು ಬಂದಿಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.