ವಾಷಿಂಗ್ಟನ್: ಜಾಗತಿಕ ಉಗ್ರ ಸಂಘಟನೆ ಜೈಷ್ –ಎ–ಮೊಹಮದ್ (ಜೆಇಎಂ) ಹಾಗೂ ಅದರ ನಾಯಕ ಮಸೂದ್ ಅಜರ್ ವಿರುದ್ಧ ಅಮೆರಿಕ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಮೆರಿಕದ ಹಿಂದೂ ವಕೀಲರ ತಂಡ ಹಾಗೂ ಕಾಶ್ಮೀರಿ ಪಂಡಿತರ ಗುಂಪು ಆಗ್ರಹಿಸಿದೆ.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂದು ಆರೋಪಿಸಿರುವ ಸಂಘಟನೆಗಳು, ಈ ಉಗ್ರಗಾಮಿ ಸಂಘಟನೆಗಳಿಗೆ ಸೌದಿ ಅರೇಬಿಯಾ ಹಾಗೂ ಚೀನಾ ನೆರವು ನೀಡುತ್ತಿವೆ ಎಂದು ಆರೋಪಿಸಿವೆ.
ದೇಶಿಯ ಹಾಗೂ ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಅಮೆರಿಕ ಛೀಮಾರಿ ಹಾಕಬೇಕು ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.