ಲಂಡನ್: ಉಕ್ರೇನ್‌ನೊಂದಿಗಿನ ಯುದ್ಧಕ್ಕಾಗಿ ರಷ್ಯಾಗೆ ಇರಾನ್ ಕಿರು ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಸರಬರಾಜು ಮಾಡುತ್ತಿದೆ ಎಂದು ಅಮೆರಿಕ ಮಂಗಳವಾರ ಆರೋಪಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಲಂಡನ್‌ಗೆ ಭೇಟಿ ನೀಡಿದ್ದು, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಮಾತುಕತೆ ನಡೆಸಿದರು.
‘ರಷ್ಯಾವು ಖಂಡಾಂತರ ಕ್ಷಿಪಣಿಗಳನ್ನು ಸ್ವೀಕರಿಸಿದೆ. ಒಂದು ವಾರದ ಒಳಗಾಗಿ ಉಕ್ರೇನ್ ಮೇಲೆ ಅವುಗಳನ್ನು ಬಳಸುವ ಸಾಧ್ಯತೆ ಇದೆ’ ಎಂದು ಹೇಳಿದರು.
ಬುಧವಾರ ಲ್ಯಾಮಿ ಮತ್ತು ಬ್ಲಿಂಕೆನ್ ಅವರು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.