ADVERTISEMENT

ಜಂಟಿ ಸಮರಾಭ್ಯಾಸಕ್ಕಾಗಿ ದಕ್ಷಿಣ ಕೊರಿಯಾಗೆ ಅಮೆರಿಕದ ‘ರೊನಾಲ್ಡ್ ರೇಗನ್’

ಏಜೆನ್ಸೀಸ್
Published 23 ಸೆಪ್ಟೆಂಬರ್ 2022, 13:13 IST
Last Updated 23 ಸೆಪ್ಟೆಂಬರ್ 2022, 13:13 IST
ಬುಸನ್‌ನ ಬಂದರು ಪ್ರವೇಶಿಸಿದ ಅಮೆರಿಕದ ‘ರೋನಾಲ್ಡ್ ರೇಗನ್’ –ಎಪಿ ಚಿತ್ರ 
ಬುಸನ್‌ನ ಬಂದರು ಪ್ರವೇಶಿಸಿದ ಅಮೆರಿಕದ ‘ರೋನಾಲ್ಡ್ ರೇಗನ್’ –ಎಪಿ ಚಿತ್ರ    

ಬುಸನ್‌, ದಕ್ಷಿಣ ಕೊರಿಯಾ: ಜಂಟಿ ಸಮರಾಭ್ಯಾಸದಲ್ಲಿ ಭಾಗಿಯಾಗಲು ಅಮೆರಿಕವು ಕಳುಹಿಸಿಕೊಟ್ಟಿರುವ, ಯುದ್ಧ ವಿಮಾನ ಸಾಗಣೆಗೆ ಬಳಸಲಾಗುವ, ಅಣುಶಕ್ತಿ ಸಾಮರ್ಥ್ಯದ ಹಡಗು ‘ರೊನಾಲ್ಡ್‌ ರೇಗನ್‌’ ಶುಕ್ರವಾರ ಇಲ್ಲಿನ ಬಂದರು ಪ್ರವೇಶಿಸಿತು.

ಉತ್ತರ ಕೊರಿಯಾದ ಬೆದರಿಕೆಯು ತೀವ್ರಗೊಳ್ಳುತ್ತಿರುವ ಹಿಂದೆಯೇ ಉಭಯ ದೇಶಗಳ ಸೇನಾ ಸಾಮರ್ಥ್ಯವನ್ನು ಬಿಂಬಿಸಲು ನಡೆಸಲಾಗುವ ಈ ಜಂಟಿ ಸಮರಾಭ್ಯಾಸದಲ್ಲಿ 2017ರ ನಂತರ ಇದೇ ಮೊದಲ ಬಾರಿಗೆ ಈ ಹಡಗು ಪಾಲ್ಗೊಳ್ಳಲಿದೆ.

ಈ ಹಿಂದೆ 2017ರಲ್ಲಿ ಉತ್ತರ ಕೊರಿಯಾ ಅಣುಶಕ್ತಿ ಮತ್ತು ಕ್ಷಿಪಣಿ ಪ್ರಯೋಗ ನಡೆಸಿದಾಗ ನಡೆದ ನೌಕಾನೆಲೆಯ ತರಬೇತಿಗಾಗಿ ಇಂತಹ ಮೂರು ಯುದ್ಧವಿಮಾನಗಳ ಸಾಗಣೆ ಹಡಗುಗಳನ್ನು ಕಳುಹಿಸಿಕೊಡಲಾಗಿತ್ತು.

ADVERTISEMENT

ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜೊತೆಗಿನ ಭಿನ್ನಮತದಿಂದಾಗಿ ಉತ್ತರ ಕೊರಿಯಾ ಈಗ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಂಟಿ ಸಮರಾಭ್ಯಾಸ ಮಹತ್ವ ಪಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೇನಾ ಕಸರತ್ತು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.