ವಾಷಿಂಗ್ಟನ್: ವಿದೇಶಿ ನೌಕರರು ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಎಚ್1ಬಿ ವೀಸಾಗೆ ಅರ್ಜಿ ಸಲ್ಲಿಸುವ ಹೊಸ ನಿಯಮಗಳನ್ನು ಅಮೆರಿಕ ಸರ್ಕಾರ ಪ್ರಕಟಿಸಿದೆ.
ಏಪ್ರಿಲ್ 1ರಿಂದ ಹೊಸ ನಿಯಮಾವಳಿಯು ಜಾರಿಗೆ ಬರಲಿದೆ. ಇದರ ಅನ್ವಯ ಅಮೆರಿಕದ ಉದ್ಯೋಗದಾತ ಕಂಪನಿಗಳ ವೆಚ್ಚ ಗಣನೀಯವಾಗಿ ಕಡಿತಗೊಳ್ಳಲಿದೆ.
ದಕ್ಷ, ಪರಿಣಾಮಕಾರಿ ಹಾಗೂ ಅಮೆರಿಕಕ್ಕೆ ಪ್ರತಿಭಾನ್ವಿನ ಉದ್ಯೋಗಿಗಳನ್ನು ಆಕರ್ಷಿಸಲು ನಿಯಮಾವಳಿಗಳು ನೆರವಾಗುತ್ತವೆ ಎಂದು ಸರ್ಕಾರ ಹೇಳಿಕೊಂಡಿದೆ.ಈ ಬಾರಿ ವೀಸಾ ಬಯಸಿ ಅರ್ಜಿ ಸಲ್ಲಿಸುವವರು ಎಲೆಕ್ಟ್ರಾನಿಕ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯ.
ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ ಪ್ರತಿ ಬಾರಿಯಂತೆ ವೀಸಾದಾರರ ಆಯ್ಕೆಗೆ ನಡೆಸುತ್ತಿದ್ದ ಪ್ರಕ್ರಿಯೆಗೆ ವಿರುದ್ಧವಾದ ನಿಯಮಾವಳಿಗಳು ಇದರಲ್ಲಿವೆ. ವೀಸಾ ನಿಯಮಗಳನ್ನು ಬದಲಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ತಿಂಗಳ ಆರಂಭದಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.