ADVERTISEMENT

ಭಯೋತ್ಪಾದನೆ ಸಂಘಟನೆಗಳ ಹಣಕಾಸು ವಹಿವಾಟಿಗೆ ಕಡಿವಾಣ ಹಾಕಿದ ಅಮೆರಿಕ

6.30 ಕೋಟಿ ಡಾಲರ್‌ ಮೊತ್ತ ತಡೆ ಹಿಡಿದ ಅಮೆರಿಕ

ಪಿಟಿಐ
Published 1 ಜನವರಿ 2021, 9:10 IST
Last Updated 1 ಜನವರಿ 2021, 9:10 IST
.
.   

ವಾಷಿಂಗ್ಟನ್: ಭಯೋತ್ಪಾದನೆ ಸಂಘಟನೆಗಳಿಗೆ ವಿವಿಧ ಮೂಲಗಳಿಂದ ಲಭ್ಯವಾಗುತ್ತಿದ್ದ 6.30 ಕೋಟಿ ಡಾಲರ್‌ (₹ 460.23 ಕೋಟಿ) ಮೊತ್ತವನ್ನು 2019ರಲ್ಲಿ ತಡೆ ಹಿಡಿಯುವಲ್ಲಿ ಅಮೆರಿಕ ಯಶಸ್ವಿಯಾಗಿದೆ.

ಭಯೋತ್ಪಾದನೆ ಸಂಘಟನೆಗಳನ್ನು ಹತ್ತಿಕ್ಕುವ ಭಾಗವಾಗಿ ಅಮೆರಿಕ ಈ ಕ್ರಮಕೈಗೊಂಡಿದೆ. ಪಾಕಿಸ್ತಾನ ಮೂಲದ ಸಂಘಟನೆಗಳು ಇದರಲ್ಲಿ ಸೇರಿವೆ.

ಲಷ್ಕರ್‌– ಎ–ತಯ್ಯಬಾದ (ಎಲ್‌ಇಟಿ) 342000 ಡಾಲರ್‌, ಜೈಷ್‌–ಎ–ಮೊಹಮ್ಮದ್‌ ಸಂಘಟನೆಯ 1,725 ಡಾಲರ್‌ ಮತ್ತು ಹರ್ಕತ್‌–ಉಲ್‌–ಮುಜಾಹಿದ್ದೀನ್‌–ಅಲ್‌–ಇಸ್ಲಾಮಿ ಸಂಘಟನೆಯ 45,798 ಡಾಲರ್‌ ಮೊತ್ತವನ್ನು ತಡೆ ಹಿಡಿಯಲಾಗಿದೆ. ಪಾಕಿಸ್ತಾನ ಮೂಲದ ಈ ಮೂರು ಸಂಘಟನೆಗಳು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿವೆ. ಹರ್ಕತ್‌–ಉಲ್‌– ಮುಜಾಹಿದ್ದೀನ್‌–ಅಲ್‌–ಇಸ್ಲಾಮಿ ಕಾಶ್ಮೀರದಲ್ಲಿ ತನ್ನ ಕೃತ್ಯಗಳನ್ನು ನಡೆಸುತ್ತಿದೆ ಎಂದು ಹಣಕಾಸು ಇಲಾಖೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ 4,321 ಡಾಲರ್‌ ಮೊತ್ತವನ್ನು ತಡೆಯಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.