ADVERTISEMENT

ಟೈಟನ್‌ ಸಬ್‌ಮರ್ಸಿಬಲ್‌ ನೌಕೆ ಅವಘಡ; ಅವಶೇಷ, ಸಾಕ್ಷ್ಯ ಸಂಗ್ರಹ

ಎಪಿ
Published 29 ಜೂನ್ 2023, 16:15 IST
Last Updated 29 ಜೂನ್ 2023, 16:15 IST
ನೌಕೆಯ ಅವಶೇಷಗಳಿಂದ ಸಂಗ್ರಹಿಸಿದ ‘ಮನುಷ್ಯನ ಉಳಿದ ಪಳೆಯುಳಿಕೆ’ ಎನ್ನಲಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದು ತರಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.(ಚಿತ್ರ: ಎ‍ಪಿ)
ನೌಕೆಯ ಅವಶೇಷಗಳಿಂದ ಸಂಗ್ರಹಿಸಿದ ‘ಮನುಷ್ಯನ ಉಳಿದ ಪಳೆಯುಳಿಕೆ’ ಎನ್ನಲಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದು ತರಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.(ಚಿತ್ರ: ಎ‍ಪಿ)   

ಪೋರ್ಟ್‌ಲ್ಯಾಂಡ್‌ (ಮೈನೆ): ಟೈಟನ್‌ ಸಬ್‌ಮರ್ಸಿಬಲ್ ನೌಕೆಯ ಅವಶೇಷಗಳಿಂದ ಸಂಗ್ರಹಿಸಿದ ‘ಮನುಷ್ಯನ ಉಳಿದ ಪಳೆಯುಳಿಕೆ’ ಎನ್ನಲಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದು ತರಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.

ಈ ಸಬ್‌ಮರ್ಸಿಬಲ್ ನೌಕೆಯು ಕಳೆದ ವಾರ ಅಂತರಿಕವಾಗಿ ಸ್ಫೋಟಗೊಂಡಿದ್ದು, ಅದರಲ್ಲಿದ್ದ ಐವರು ಮೃತಪಟ್ಟಿದ್ದರು. ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗಾಗಿ ಇವರು ತೆರಳಿದ್ದರು.

ಟೈಟಾನ್‌ ಸಬ್‌ಮರ್ಸಿಬಲ್‌ ನೌಕೆಯ ಅವಶೇಷಗಳನ್ನು ಬುಧವಾರ ಸೇಂಟ್‌ ಜಾನ್‌ ಬಂದರಿಗೆ ತರಲಾಗಿತ್ತು. ನೌಕೆಯ ಅಂತರಿಕ ಸ್ಫೋಟದ ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ಇದು ಮುಖ್ಯ ಸಾಕ್ಷ್ಯವಾಗಲಿದೆ ಎನ್ನಲಾಗಿದೆ.

ADVERTISEMENT

ಬುಧವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಕರಾವಳಿ ಕಾವಲು ಪಡೆಯು, ತಾನು ಅವಶೇಷಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಇದರಲ್ಲಿ ತಾನು ‘ಮಾನವನ ಉಳಿದ ಪಳೆಯುಳಿಕೆ’ ಎಂದು ಭಾವಿಸುವ ಸಾಕ್ಷ್ಯವು ಸೇರಿವೆ‘ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.