ವಾಷಿಂಗ್ಟನ್: ಮ್ಯಾನ್ಮಾರ್‌ನಲ್ಲಿ ಬಂಧಿತ ನಾಯಕಿ ಆಂಗ್ ಸಾನ್ ಸೂಕಿ ಅವರ ನೇತೃತ್ವದ ರಾಜಕೀಯ ಪಕ್ಷವನ್ನು ವಿಸರ್ಜಿಸಿರುವ ಸೇನೆ ನೇತೃತ್ವದ ಸರ್ಕಾರದ ಕ್ರಮವನ್ನು ಅಮೆರಿಕ ಖಂಡಿಸಿದೆ.
ಈ ಬೆಳವಣಿಗೆಯು ಮ್ಯಾನ್ಮಾರ್‌ನಲ್ಲಿ ಇನ್ನಷ್ಟು ಅಸ್ಥಿರತೆಗೆ ಕಾರಣವಾಗಲಿದೆ ಎಂದೂ ಹೇಳಿದೆ. ಸೇನೆ ರೂಪಿಸಿದ ಕಾಯ್ದೆಯಡಿ ನೋಂದಣಿಯಾಗದ ಕಾರಣ ಪಕ್ಷವನ್ನು ವಿಸರ್ಜಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತ್ತು.
ಸೂಕಿ ನೇತೃತ್ವದ ಚುನಾಯಿತ ಸರ್ಕಾರ ಪದಚ್ಯುತಗೊಳಿಸಿ 2021ರ ಫೆಬ್ರುವರಿಯಲ್ಲಿ ಸೇನೆ ಅಧಿಕಾರ ಹಿಡಿದಿತ್ತು. ಚುನಾವಣೆ ಹೊತ್ತಿನಲ್ಲಿ ವಿರೋಧಿಗಳನ್ನು ಹತ್ತಿಕ್ಕಲು ಸೇನಾ ಆಡಳಿತ ಈ ಕ್ರಮವಹಿಸಿದೆ ಎಂದು ಹೇಳಲಾಗಿದೆ.
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಸೇರಿದಂತೆ 40 ಪಕ್ಷಗಳನ್ನು ವಿಸರ್ಜಿಸುವ ಮ್ಯಾನ್ಮಾರ್‌ನ ಸೇನಾ ಆಡಳಿತದ ಕ್ರಮವನ್ನು ಅಮೆರಿಕ ಖಂಡಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.