ವಾಷಿಂಗ್ಟನ್: ಮೊದಲ ಜಾಗತಿಕ ಯುದ್ಧದಲ್ಲಿ ಮಡಿದ ಅಮೆರಿಕ ಸೇನೆಯ ಸಿಬ್ಬಂದಿಗಿಂತ ಹೆಚ್ಚು ಜನರು ಈಗ ಈ ದೇಶದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.
ಮೊದಲ ಜಾಗತಿಕ ಯುದ್ಧದಲ್ಲಿ ಸೈನಿಕರು ಸೇರಿದಂತೆ 1,16,516 ಜನರು ಮೃತಪಟ್ಟಿದ್ದರು. ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 1,16,526 ಎಂದು ಜಾನ್ಸ್ ಹಾಪ್‌ಕಿನ್ಸ್ ಯುನಿವರ್ಸಿಟಿಯ ಅಂಕಿ–ಅಂಶಗಳು ಹೇಳುತ್ತವೆ.
ಈ ಅಂಕಿ–ಸಂಖ್ಯೆಗಳೇ ನಿಖರ ಎನ್ನಲಾಗದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೊದಲ ಜಾಗತಿಕ ಯುದ್ಧದಲ್ಲಿ ಮೃತಪಟ್ಟವರು ಎಷ್ಟು ಜನ ಎಂಬುದನ್ನು ಎಣಿಕೆ ಮಾಡುವುದು ಆಗ ದೊಡ್ಡ ಸವಾಲೇ ಆಗಿತ್ತು. ಆದರೆ, ಇತಿಹಾಸಕಾರರು ಮತ್ತು ಸಂಸತ್‌ನ ಸಂಶೋಧನಾ ಸೇವಾ ವಿಭಾಗದ ಲೆಕ್ಕಾಚಾರದ ಪ್ರಕಾರ ಸತ್ತವರ ಸಂಖ್ಯೆ 1,16,516.
ಈಗ ವ್ಯಾಪಕವಾಗಿ ಕೋವಿಡ್ ಪರೀಕ್ಷೆ ನಡೆಸುವುದೂ ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಈಗಲೂ ಕೋವಿಡ್‌ನಿಂದಾಗಿಯೇ ಮೃತರ ಸಂಖ್ಯೆ ಎಷ್ಟು ಎಂಬುದನ್ನು ನಿಖರವಾಗಿ ಹೇಳಲಾಗದು ಎಂದು ಮೂಲಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.