ADVERTISEMENT

ಒಡೆದಾಳುವ ರಾಜಕಾರಣ ತಪ್ಪಿಸಲು ಟ್ರಂಪ್ ಪುನರಾಯ್ಕೆ ಮಾಡಿ: ಮೈಕ್ ಪೊಂಪಿಯೊ

ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ

ಪಿಟಿಐ
Published 26 ಆಗಸ್ಟ್ 2020, 8:43 IST
Last Updated 26 ಆಗಸ್ಟ್ 2020, 8:43 IST
ಕಾರ್ಯದರ್ಶಿ ಮೈಕ್ ಪೊಂಪಿಯೊ
ಕಾರ್ಯದರ್ಶಿ ಮೈಕ್ ಪೊಂಪಿಯೊ   

ವಾಷಿಂಗ್ಟನ್: ಬಹು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಒಡೆದಾಳುವ ರಾಜಕಾರಣಕ್ಕೆ ಅಂತ್ಯ ಹಾಡಲು ಡೊನಾಲ್ಡ್ ಟ್ರಂಪ್ ಅವರನ್ನು ಪುನರ್ ಆಯ್ಕೆ ಮಾಡಬೇಕು ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

ಇಲ್ಲಿನ ರಿಪಬ್ಲಿಕನ್ ಸಮಾವೇಶದಲ್ಲಿ ಮಾತನಾಡಿದ ಪಾಂಪಿಯೊ, ’ದೇಶದಲ್ಲಿ ಹಿಂದಿನಿಂದಲೂ ಪಕ್ಷಪಾತ ಹಾಗೂ ಒಡೆದಾಳುವ ರಾಜಕಾರಣದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಒಡೆದಾಳುವ ರಾಜಕೀಯವನ್ನು ತಪ್ಪಿಸಲು ಹಾಗೂ ದೇಶದ ಸುರಕ್ಷತೆಗಾಗಿ ಟ್ರಂಪ್ ಅವರನ್ನು ಪುನರಾಯ್ಕೆ ಮಾಡಿ’ ಎಂದು ಅಮೆರಿಕನ್ ಮತದಾರರಿಗೆ ಕರೆ ನೀಡಿದರು.

ಸಮಾವೇಶದಲ್ಲಿ ಜರುಸಲೇಮ್ ರಾಷ್ಟ್ರದಲ್ಲಿ ನಡೆದ ಬೆಳವಣಿಗಗಳ ಬಗ್ಗೆ ನಡೆದ ಚರ್ಚೆಯ ನಂತರ ಪಾಂಪಿಯೊ ಈ ಮೇಲಿನ ಮಾತುಗಳನ್ನು ಉಲ್ಲೇಖಿಸಿದ್ದರು. ಆನಂತರ ’ಇಸ್ರೇಲ್ ವಿಚಾರದಲ್ಲಿ ನಾನು ಆಡಿದ ಮಾತುಗಳೆಲ್ಲ ವೈಯಕ್ತಿಕ ಅಭಿಪ್ರಾಯಗಳು’ ಎಂದು ಸ್ಪಷ್ಟನೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.