ADVERTISEMENT

US Election | ಡೊನಾಲ್ಡ್ ಟ್ರಂಪ್‌ಗೆ ವಿಶ್ವನಾಯಕರಿಂದ ಅಭಿನಂದನೆಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 10:03 IST
Last Updated 6 ನವೆಂಬರ್ 2024, 10:03 IST
<div class="paragraphs"><p>ಡೊನಾಲ್ಡ್ ಟ್ರಂಪ್‌</p></div>

ಡೊನಾಲ್ಡ್ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌ ಅವರಿಗೆ ಜಗತ್ತಿನ ವಿವಿಧ ದೇಶಗಳ ನಾಯಕರು ಅಭಿನಂದಿಸಿದ್ದಾರೆ.

ADVERTISEMENT

ಟ್ರಂಪ್‌ಗೆ ಅಭಿನಂದಿಸಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ‘ಮೈತ್ರಿ, ಮೌಲ್ಯಗಳ ಜತೆಗೆ ಐತಿಹಾಸಿಕ ಸ್ನೇಹ ಹೊಂದಿರುವ ಇಟಲಿ ಮತ್ತು ಅಮೆರಿಕ ಸೋದರ ರಾಷ್ಟ್ರಗಳಾಗಿವೆ. ಈ ಕಾರ್ಯತಂತ್ರದ ಬಂಧವನ್ನು ಇನ್ನಷ್ಟು ಬಲಪಡಿಸಲಿದ್ದೇವೆ ಎನ್ನುವ ನಂಬಿಕೆಯಿದೆ’ ಎಂದು ಹೇಳಿದ್ದಾರೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಯುರೋಪ್‌ ನಾಯಕರು ಟ್ರಂಪ್‌ಗೆ ಅಭಿನಂದಿಸಿದ್ದು, ‘ನಾಲ್ಕು ವರ್ಷಗಳ ಕಾಲ ನಮಗೆ ಗೌರವ, ಮಹತ್ವಕಾಂಕ್ಷೆಯೊಂದಿಗೆ ಹೆಚ್ಚಿನ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದಿದ್ದಾರೆ.

ಯುಕೆ ಪ್ರಧಾನಿ ಕೀರ್‌ ಸ್ಟಾರ್ಮರ್‌, ‘ಅಮೆರಿಕ ಮತ್ತು ಯುಕೆ ದೇಶಗಳ ನಡುವೆ ವಿಶೇಷ ಬಾಂಧವ್ಯವಿದೆ. ಟ್ರಂಪ್‌ ಅಧ್ಯಕ್ಷರಾದ ಬಳಿಕ ಅಮೆರಿಕದ ಹೊಸ ಆಡಳಿತದೊಂದಿಗೆ ಅದೇ ರೀತಿಯ ಸಂಬಂಧ ಮುಂದುವರಿಯಲಿದೆ’ ಎಂದಿದ್ದಾರೆ. 

ಟ್ರಂಪ್‌ಗೆ ಅಭಿನಂದಿಸಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಜಾಗತಿಕ ವ್ಯವಹಾರಗಳಲ್ಲಿ ಶಕ್ತಿಯ ಮೂಲಕ ಶಾಂತಿಯನ್ನು ತರುವ ವಿಧಾನಕ್ಕೆ ಟ್ರಂಪ್ ಅವರ ಬದ್ಧತೆಯನ್ನು ನಾನು ಪ್ರಶಂಸಿಸುತ್ತೇನೆ. ಇದು ಉಕ್ರೇನ್‌ನಲ್ಲಿ ಪ್ರಾಯೋಗಿಕವಾಗಿ ಶಾಂತಿಯನ್ನು ತರಬಲ್ಲ ತತ್ವವಾಗಿದೆ’ ಎಂದಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ‘ಇತಿಹಾಸ ಮರುಕಳಿಸುವಂತೆ ಮಾಡಿದ ಟ್ರಂಪ್‌ಗೆ ಅಭಿನಂದನೆಗಳು. ಶ್ವೇತಭವನಕ್ಕೆ ನೀವು ವಾಪಸ್ಸಾಗುತ್ತಿರುವುದು ಅಮೆರಿಕ ಮತ್ತು ಇಸ್ರೇಲ್‌ ನಡುವಿನ ದೊಡ್ಡ ಮೈತ್ರಿಗೆ ಹೊಸ ಆರಂಭ. ಇದು ಅತಿದೊಡ್ಡ ಗೆಲುವು’ ಎಂದಿದ್ದಾರೆ,

ಟ್ರಂಪ್‌ ಗೆಲುವಿಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ‘ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಗೆಲುವಿನ ಸಹಕಾರದೊಂದಿಗೆ ಚೀನಾ ಅಮೆರಿಕದೊಂದಿಗೆ ಕೆಲಸ ಮಾಡಲಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.