ಬಾಗ್ದಾದ್: ಇರಾಕ್‌ನಲ್ಲಿರುವ ತನ್ನೆಲ್ಲ ಪ್ರಜೆಗಳೂ ಕೂಡಲೇ ಸ್ವದೇಶಕ್ಕೆ ಮರಳಬೇಕು ಎಂದು ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಶುಕ್ರವಾರ ತಿಳಿಸಿದೆ.
ಇರಾನ್‌ನ ಪ್ರಭಾವಿ ಸೇನಾಧಿಕಾರಿ ಖಾಸಿಂ ಸುಲೆಮಾನಿಯನ್ನು ಕೊಂದ ಬೆನ್ನಿಗೇ ಇರಾಖ್‌ನಲ್ಲಿರುವ ತನ್ನ ಪ್ರಜೆಗಳಿಗೆ ಅಮೆರಿಕ ನೀಡಿರುವ ಈ ಸೂಚನೆ ಕುತೂಹಲಕ್ಕೆ ಕಾರಣವಾಗಿದೆ.
‘ಇರಾಕ್ ಮತ್ತು ನೆರೆ ರಾಷ್ಟ್ರಗಳಲ್ಲಿ ಆತಂಕದ ವಾತಾವರಣನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಪ್ರಜೆಗಳೆಲ್ಲರೂ ಕೂಡಲೇ ತಾಯ್ನಾಡಿಗೆ ಹಿಂದಿರುಗಬೇಕು. ಇರಾಕ್‌ಗೆ ಪ್ರವಾಸ ಕೈಗೊಂಡಿರುವವರು ತಮ್ಮ ನಿರ್ಧಾರವನ್ನು ಪರಿಶೀಲಿಸಬೇಕು. ಅಮೆರಿಕ ಪ್ರಜೆಗಳು ದೇಶಕ್ಕೆ ಹಿಂದಿರುಗುವಾಗವಿಮಾನದಲ್ಲಿ ಬರುವುದು ಒಳಿತು. ಅದು ಸಾಧ್ಯವಾಗದೇ ಹೋದರೆ, ರಸ್ತೆ ಮಾರ್ಗವಾಗಿ ಇತರ ರಾಷ್ಟ್ರಗಳಿಗೆ ತೆರಳಬೇಕು,’ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಶುಕ್ರವಾರ ರಾಕೆಟ್ ದಾಳಿ ನಡೆಸಿದ್ದ ಅಮೆರಿಕ ಇರಾನ್‌ನ ಪ್ರಭಾವಿ ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೆಮಾನಿ ಸೇರಿ 8 ಮಂದಿಯನ್ನು ಕೊಂದಿತ್ತು. ಈ ದಾಳಿಗೆ ಸ್ವತಃ ಅಮೆರಿಕ ಅಧ್ಯಕ್ಷರೇ ಸೂಚಿಸಿದ್ದರು ಎಂದು ಅಮೆರಿಕ ಸೇನೆ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.