ADVERTISEMENT

ಎಚ್‌–1ಬಿ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ

ಪಿಟಿಐ
Published 1 ಫೆಬ್ರುವರಿ 2024, 15:47 IST
Last Updated 1 ಫೆಬ್ರುವರಿ 2024, 15:47 IST
.
.   

ವಾಷಿಂಗ್ಟನ್‌: ವಲಸಿಗರಲ್ಲದವರಿಗೆ ನೀಡುವ ಎಚ್‌–1ಬಿ, ಎಲ್‌–1 ಮತ್ತು ಇಬಿ–5 ವೀಸಾಗಳ ಶುಲ್ಕವನ್ನು ಅಮೆರಿಕ ಸರ್ಕಾರ ಏರಿಕೆ ಮಾಡಿದೆ.

2016ರ ಬಳಿಕ ಇದೇ ಮೊದಲ ಬಾರಿಗೆ ಶುಲ್ಕ ಏರಿಕೆ ಮಾಡಲಾಗಿದ್ದು, ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಎಚ್‌1–ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ (ಫಾರಂ ಐ–129) ಶುಲ್ಕವನ್ನು ಅಮೆರಿಕ ಡಾಲರ್‌ 460 (₹38,177) ರಿಂದ 780ಕ್ಕೆ (₹ 64,735) ಏರಿಕೆ ಮಾಡಲಾಗಿದೆ.

ADVERTISEMENT

ಎಲ್‌ 1 ವೀಸಾದ ಶುಲ್ಕವನ್ನು 460 ಡಾಲರ್‌ನಿಂದ (₹38,177) 1,385 ಡಾಲರ್‌ಗೆ (ಅಂದಾಜು ₹1.14 ಲಕ್ಷ) ಏರಿಕೆ ಮಾಡಲಾಗಿದೆ. ಇಬಿ–5 ವೀಸಾದ ಶುಲ್ಕವನ್ನು 3,675 ಡಾಲರ್‌ನಿಂದ (ಅಂದಾಜು ₹3 ಲಕ್ಷ) 11,160 ಡಾಲರ್‌ಗೆ (ಅಂದಾಜು ₹9.25 ಲಕ್ಷ) ಹೆಚ್ಚಿಸಿರುವುದಾಗಿ ಅಮೆರಿಕ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಚ್‌1–ಬಿ ವೀಸಾದ ನೋಂದಣಿ ಶುಲ್ಕ 10 ಡಾಲರ್‌ನಿಂದ (₹ 830) 215 ಡಾಲರ್‌ಗೆ (₹ 17,843) ಏರಿಕೆಯಾಗಲಿದ್ದು, ಅದು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಕಂಪನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ತಾಂತ್ರಿಕ ಪರಿಣತ ಕ್ಷೇತ್ರಗಳಿಗೆ ನೇಮಕ ಮಾಡಿಕೊಳ್ಳಲು ಎಚ್–1ಬಿ ವೀಸಾ ಅಗತ್ಯವಾಗಿದೆ. ತಂತ್ರಜ್ಞಾನ ಕಂಪನಿಗಳು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ನೌಕರರನ್ನು ಪ್ರತಿ ವರ್ಷ ಈ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ.

ಇಬಿ–5 ವೀಸಾ ಯೋಜನೆಯನ್ನು ಅಮೆರಿಕ ಸರ್ಕಾರವು 1990ರಲ್ಲಿ ಪರಿಚಯಿಸಿತ್ತು. ಹೂಡಿಕೆದಾರರಿಗೆ ಮತ್ತು ಅವರ ಕುಟುಂಬಕ್ಕೆ ಈ ವೀಸಾ ಪಡೆಯಬಹುದಾಗಿದೆ. ಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.