ADVERTISEMENT

ಗ್ರೀನ್‌ಕಾರ್ಡ್: ಶೇ 7 ಮಿತಿ ತೆರವು ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:21 IST
Last Updated 11 ಜುಲೈ 2019, 20:21 IST
green card
green card   

ವಾಷಿಂಗ್ಟನ್:ವಲಸಿಗರಿಗೆ ಗ್ರೀನ್‌ಕಾರ್ಡ್‌ ನೀಡಲು ದೇಶಗಳ ಮೇಲೆ ಇದ್ದ ಶೇ 7ರ ಮಿತಿಯನ್ನು ತೆರವುಗೊಳಿಸುವ ಮಹತ್ವದ ಮಸೂದೆ ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ ಭಾರಿ ಬಹುಮತದಿಂದ ಅಂಗೀಕಾರವಾಗಿದೆ.

ಸೆನೆಟ್‌ನಲ್ಲಿ ಈ ಮಸೂದೆ ಅಂಗೀಕಾರವಾದರೆ ಬಳಿಕ ಅಮೆರಿಕ ಅಧ್ಯಕ್ಷರ ಅಂಕಿತದೊಂದಿಗೆ ಕಾನೂನಾಗಿ ಜಾರಿಗೆ ಬರಲಿದೆ. ಸೆನೆಟ್‌ನಲ್ಲಿ ಜನ ಪ್ರತಿನಿಧಿಗಳದ್ದೇ ಸಂಖ್ಯಾಬಲವಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ಉದ್ಯೋಗ ಹಾಗೂ ವಾಸಕ್ಕೆ ಅನುಮತಿ ಪಡೆಯಲು ದೀರ್ಘಕಾಲದಿಂದ ಕಾಯುತ್ತಿರುವ ಭಾರತದ ಸಾವಿರಾರು ಪ್ರತಿಭಾವಂತ ಐಟಿ ಉದ್ಯೋಗಿಗಳುಇದರಿಂದ ನಿರಾಳವಾಗಲಿದ್ದಾರೆ.

ADVERTISEMENT

**

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೌಶಲ ಆಧರಿತ ಸಕ್ರಮ ವಲಸೆ ಬೆಂಬಲಿಸುವುದಾದರೆ ಈ ಮಸೂದೆಯನ್ನು ಜಾರಿಗೆ ತರಬೇಕು
–ಝೊ ಲಾಫ್‌ಗ್ರೆನ್, ಅಮೆರಿಕ ಸಂಸತ್ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.