ವಾಷಿಂಗ್ಟನ್: ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ವಲಸಿಗರಿಗೆ ಹಾಗೂ ಎಚ್–1ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಕೆಳಮನೆ) ಅನುಮೋದನೆ ನೀಡಿದೆ.
‘ಅಮೆರಿಕನ್ ಡ್ರೀಮ್ ಆ್ಯಂಡ್ ಪ್ರಾಮಿಸ್ ಆ್ಯಕ್ಟ್–2021’ ಮಸೂದೆಗೆ ಕೆಳಮನೆ 228–197 ಮತಗಳಿಂದ ಅನುಮೋದನೆ ನೀಡಿತು. ಸೆನೆಟ್‌ನ ಅನುಮೋದನೆ ದೊರೆತ ನಂತರ, ಈ ಮಸೂದೆ ಕಾಯ್ದೆ ರೂಪದಲ್ಲಿ ಜಾರಿಯಾಗುವುದು.
‘ನಾನು ಈ ಮಸೂದೆಯನ್ನು ಬೆಂಬಲಿಸುತ್ತೇನೆ. ಮಹತ್ವದ ಈ ಮಸೂದೆಗೆ ಅನುಮೋದನೆ ನೀಡಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಅನ್ನು ಅಭಿನಂದಿಸುತ್ತೇನೆ’ ಎಂದು ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಗುವಾಗಿದ್ದಾಗ ಪಾಲಕರೊಂದಿಗೆ ಅಮೆರಿಕಕ್ಕೆ ಬಂದವರಿಗೆ ‘ಡ್ರೀಮರ್ಸ್’ ಎಂದು ಕರೆಯಲಾಗುತ್ತದೆ. ಇವರನ್ನು ಸೇರಿದಂತೆ ವಿವಿಧ ವರ್ಗದ ವಲಸಿಗರು ಅಮೆರಿಕದ ಪೌರತ್ವದ ನಿರೀಕ್ಷೆಯಲ್ಲಿದ್ದಾರೆ.
5 ಲಕ್ಷಕ್ಕೂ ಅಧಿಕ ಭಾರತೀಯರು ಸೇರಿದಂತೆ 1.10 ಕೋಟಿ ವಲಸಿಗರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಜೋ ಬೈಡನ್ ಅವರು ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ದಾಖಲೆಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.