ವಾಷಿಂಗ್ಟನ್: ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳ ನಡುವೆ ನಿಕಟ ಸಂಬಂಧ ವೃದ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ‘ಕ್ವಾಡ್ ಇಂಟ್ರಾ ಪಾರ್ಲಿಮೆಂಟರಿ ವರ್ಕಿಂಗ್ ಗ್ರೂಪ್’ ರಚಿಸುವ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ ನೀಡಿದೆ.
ಮಸೂದೆಯ ಪರವಾಗಿ 379 ಮತಗಳು ಮತ್ತು ವಿರುದ್ಧವಾಗಿ 39 ಮತಗಳು ಬಿದ್ದವು. ‘ಕ್ವಾಡ್’ ದೇಶಗಳ ನಡುವಿನ ಸಬಂಧ ಮತ್ತು ಸಹಕಾರ ವೃದ್ಧಿಗೆ ಇದು ಪೂರಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.