ADVERTISEMENT

ಸಾಗರ ರಕ್ಷಣೆ ಮಾತುಕತೆ: ಭಾರತಕ್ಕೆ ಅಮೆರಿಕದ ಉನ್ನತ ನಿಯೋಗ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:30 IST
Last Updated 4 ಸೆಪ್ಟೆಂಬರ್ 2022, 16:30 IST

ವಾಷಿಂಗ್ಟನ್:ಅಮೆರಿಕ ಮತ್ತು ಭಾರತ ನಡುವೆ ಮುಂದಿನ ವಾರ ನವದೆಹಲಿಯಲ್ಲಿ 2+2 ಅಧಿವೇಶನ ಮತ್ತು ಕಡಲ ರಕ್ಷಣೆ ಕುರಿತ ಮಾತುಕತೆ ನಡೆಯಲಿದೆ. ಇದಕ್ಕಾಗಿ ಅಮೆರಿಕದ ಹಿರಿಯ ಅಧಿಕಾರಿಗಳ ನಿಯೋಗವೊಂದು ಭಾರತಕ್ಕೆ ಪ್ರಯಾಣ ಕೈಗೊಳ್ಳಲಿದೆ.

ಸೆ. 5ರಿಂದ 8ರ ಅವಧಿಯಲ್ಲಿ ದೆಹಲಿಗೆ ಭೇಟಿ ನೀಡುವ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ವಹಿಸಲಿದ್ದಾರೆ. ಅಮೆರಿಕ-ಭಾರತ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಗಾಢಗೊಳಿಸುವುದು ನಿಯೋಗದ ಭೇಟಿ ಉದ್ದೇಶವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತ ಮತ್ತು ಅಮೆರಿಕ ನಡುವೆಮುಕ್ತ, ತೆರೆದ ಸಹಕಾರ,ಸಂಪರ್ಕ ವಿಸ್ತರಣೆ,ಇಂಡೋ-ಪೆಸಿಫಿಕ್ ಪ್ರದೇಶದಲ್ಲಿಮಾನವ ಹಕ್ಕುಗಳ ರಕ್ಷಣೆ ಸೇರಿ ಹಲವು ವಿಷಯಗಳಲ್ಲಿ ಸಹಕಾರ ಮತ್ತು ಬೆಂಬಲವನ್ನು ಪರಸ್ಪರ ವಿಸ್ತರಿಸುವ ಮಾರ್ಗಗಳ ಬಗ್ಗೆ ಭಾರತದ ಹಿರಿಯ ಅಧಿಕಾರಿಗಳೊಂದಿಗೆ ನಿಯೋಗದ ಸದಸ್ಯರು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.