ವಾಷಿಂಗ್ಟನ್: ಕೊರೊನಾ ವೈರಸ್‌ನ ಉಗಮಕ್ಕೆ ಸಂಬಂಧಿಸಿದಂತೆ ತನ್ನ ಏಜೆನ್ಸಿಗಳು ಎರಡು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆ ಗುರುವಾರ ಒಪ್ಪಿಕೊಂಡಿದೆ.
'ಸೋಂಕುಗೊಂಡ ಪ್ರಾಣಿಗಳೊಂದಿಗಿನ ಮಾನವ ಸಂಪರ್ಕದಿಂದ ಕೊರೊನಾ ವೈರಸ್ ಸ್ವಾಭಾವಿಕವಾಗಿ ಹರಡಿರುವುದು ಒಂದು ವಾದವಾದರೆ, ಪ್ರಯೋಗಾಲಯದ ಪ್ರಮಾದದಿಂದ ಸಾಂಕ್ರಾಮಿಕ ಸೃಷ್ಟಿಯಾಗಿದೆ ಎಂಬುದು ಎರಡನೇ ವಾದವಾಗಿದೆ,' ಎಂದು ಅಮೆರಿಕ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದೆ.
ಇದನ್ನೂ ಓದಿ:ಕೊರೊನಾ ವೈರಸ್ಗೆ ಚೀನಾ ಪ್ರಯೋಗಾಲಯವೇ ಮೂಲ
'ಈ ವೈರಸ್ ಎಲ್ಲಿ, ಹೇಗೆ, ಯಾವಾಗ ಪ್ರಸರಣೆಗೊಂಡಿತು ಎಂಬುದರ ಬಗ್ಗೆ ಅಮೆರಿಕದ ಗುಪ್ತಚರ ಸಮುದಾಯಕ್ಕೆ ನಿಖರವಾಗಿ ಗೊತ್ತಿಲ್ಲ. ಆದರೆ, ವೈರಸ್‌ನ ಉಗಮಕ್ಕೆ ಸಂಬಂಧಿಸಿದಂತೆ ಎರಡು ವಾದಗಳನ್ನು ರೂಪಿಸಿದ್ದೇವೆ. ಒಂದು ಇನ್ನೊಂದಕ್ಕಿಂತ ಹೆಚ್ಚು ಸೂಕ್ತ ಎಂದು ನಿರ್ಣಯ ಮಾಡಲು ಸಾಕುಗುವಷ್ಟು ಮಾಹಿತಿ ಇಲ್ಲ ಎಂದು ಬಹುತೇಕರು ಒಪ್ಪಿದ್ದಾರೆ,' ಎಂದು ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಹೇಳಿದೆ.
ಅಮೆರಿಕ ಗುಪ್ತಚರ ಇಲಾಖೆಯ 17 ಏಜೆನ್ಸಿಗಳ ಪೈಕಿ ಯಾವ ಏಜೆನ್ಸಿ ಯಾವ ವಾದವನ್ನು ಪ್ರತಿಪಾದಿಸುತ್ತಿದೆ ಎಂಬುದನ್ನು ನಿರ್ದೇಶಕರ ಕಚೇರಿ ಸ್ಪಷ್ಟಪಡಿಸಿಲ್ಲ. ಈ ಕುರಿತ ಚರ್ಚಿಸಲು ಅಮೆರಿಕ ಗುಪ್ತಚರ ಇಲಾಖೆ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.