ನ್ಯೂಯಾರ್ಕ್: ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯುವಂತೆ ಸೌದಿ ಅರೇಬಿಯಾ ರಾಜಮನೆತನದ ಒಬ್ಬ ಸದಸ್ಯ, ಕೆಲ ಹಾಲಿ ಮತ್ತು ಮಾಜಿ ನೌಕರರಿಗೆ ಅಮೆರಿಕ ಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ನ್ಯಾಯಾಧೀಶರಾದ ಸಾರಾ ನೆಟ್‌ಬರ್ನ್, ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಲು ಆರೋಪಿಗಳಿಗೆ ಸೌದಿ ಅರೇಬಿಯಾವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸೆ.11ರಂದು ದಾಳಿ ನಡೆಸಿದ್ದ ಅಲ್‌ಖೈದಾಉಗ್ರ ಸಂಘಟನೆಗೆ ಅಮೆರಿಕದಲ್ಲಿದ್ದ ಸೌದಿ ಅರೇಬಿಯಾ ಅಧಿಕಾರಿಗಳು ಸಹಾಯ ಮಾಡಿದ್ದರು ಎಂದು ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳು ಆರೋಪಿಸಿವೆ. ಅಲ್ಲದೇ, ಭಾರಿ ಪ್ರಮಾಣದಲ್ಲಿ ಪರಿಹಾರ ಧನ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿವೆ.
ಸೌದಿ ರಾಜಮನೆತನದ ರಾಜಕುಮಾರ ಬಂದರ್ ಬಿನ್ ಸುಲ್ತಾನ್ ವಿರುದ್ಧವೂ ಆರೋಪ ಹೊರಿಸಲಾಗಿದೆ. ಅವರು, ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ. 1983ರಿಂದ 2005ರ ವರೆಗೆ ಅವರು ಅಮೆರಿಕದಲ್ಲಿ ಸೌದಿ ಅರೇಬಿಯಾದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳಲ್ಲಿಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.