ADVERTISEMENT

ಹೌತಿ ಉಗ್ರರ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:15 IST
Last Updated 17 ಅಕ್ಟೋಬರ್ 2024, 16:15 IST
<div class="paragraphs"><p> ವೈಮಾನಿಕ ದಾಳಿ ( ಪ್ರಾತಿನಿಧಿಕ ಚಿತ್ರ)</p></div>

ವೈಮಾನಿಕ ದಾಳಿ ( ಪ್ರಾತಿನಿಧಿಕ ಚಿತ್ರ)

   

ರಾಯಿಟರ್ಸ್‌ ಚಿತ್ರ

ದುಬೈ: ಯೆಮೆನ್‌ನ ಹೌತಿ ಬಂಡುಕೋರರು ಬಳಸುತ್ತಿದ್ದ ಸುರಂಗ ಬಂಕರ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕವು ದೂರ ವ್ಯಾಪ್ತಿಯ ಬಿ-2 ಸ್ಟೆಲ್ತ್ ಬಾಂಬರ್‌ಗಳ ಮೂಲಕ ಗುರುವಾರ ನಸುಕಿನಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ದಾಳಿಯಿಂದ ಯಾವ ಸ್ವರೂಪದಲ್ಲಿ ಹಾನಿ ಉಂಟಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಗಾಜಾ ಪಟ್ಟಿಯಲ್ಲಿ ಇಸ್ರೇಲ್‌, ಹಮಾಸ್ ಬಂಡುಕೋರರ ವಿರುದ್ಧ ಯುದ್ಧ ನಡೆಸುತ್ತಿರುವಾಗ, ಹಮಾಸ್‌ ಬಂಡುಕೋರರನ್ನು ಬೆಂಬಲಿಸಿ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಹಲವು ತಿಂಗಳುಗಳಿಂದ ದಾಳಿ ನಡೆಸುತ್ತಿದ್ದರು. ಹೌತಿ ಬಂಡುಕೋರರನ್ನು ಗುರಿಯಾಗಿಸಿ ಅಮೆರಿಕ ಅಪರೂಪದ ಬೆಳವಣಿಗೆಯಲ್ಲಿ ಅತ್ಯಾಧುನಿಕ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಿದೆ.

ಯೆಮೆನ್‌ನ ರಾಜಧಾನಿ ಸನಾ ಸುತ್ತಲೂ ಮತ್ತು ಹೌತಿ ಭದ್ರಕೋಟೆಯಾದ ಸಾದಾ ಸುತ್ತಲೂ ವೈಮಾನಿಕ ದಾಳಿಗಳು ನಡೆದಿವೆ ಎಂದು ಹೌತಿ ಬಂಡುಕೋರರ ಅಲ್-ಮಸಿರಾಹ್ ಉಪಗ್ರಹ ಸುದ್ದಿ ವಾಹಿನಿ ವರದಿ ಮಾಡಿದೆ. ಈ ದಾಳಿಯಲ್ಲಿ ಉಂಟಾಗಿರುವ ಸಾವುನೋವು ಅಥವಾ ಹಾನಿಯ ಬಗ್ಗೆ ವಾಹಿನಿಯು ಮಾಹಿತಿ ನೀಡಿಲ್ಲ.

ಅಮೆರಿಕ ನಡೆಸಿರುವ ಈ ವೈಮಾನಿಕ ದಾಳಿಯು, ಕಳೆದ ವರ್ಷ ಎರಡು ಬಾರಿ ಇಸ್ರೇಲ್ ಮೇಲೆ ಗುರಿ ನಿರ್ದೇಶಿತ ಕ್ಷಿಪಣಿಗಳ ದಾಳಿ ನಡೆಸಿರುವ ಹೌತಿಗಳನ್ನು ಬೆಂಬಲಿಸುತ್ತಿರುವ ಇರಾನ್‌ಗೆ ನೀಡಿರುವ ಪರೋಕ್ಷ ಎಚ್ಚರಿಕೆಯಂತೆ ಕಂಡುಬಂದಿದೆ.

ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶಗಳಲ್ಲಿನ ನೆಲದಾಳದ ಐದು ಶಸ್ತ್ರಾಗಾರಗಳನ್ನು ಬಿ–2 ಬಾಂಬರ್‌ಗಳು ಧ್ವಂಸಗೊಳಿಸಿವೆ. ಈ ಮೂಲಕ ಅಮೆರಿಕದ ವಿಶಿಷ್ಟ ಸಾಮರ್ಥ್ಯವನ್ನು ವಿರೋಧಿಗಳಿಗೆ ತೋರಿಸಿದ್ದೇವೆ.
–ಲಾಯ್ಡ್ ಆಸ್ಟಿನ್, ಅಮೆರಿಕ ರಕ್ಷಣಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.