ADVERTISEMENT

ಅಮೆರಿಕ ನೌಕಾಪಡೆಯ ವಿಮಾನ ನಾರ್ವೆಯಲ್ಲಿ ನಾಪತ್ತೆ

ಏಜೆನ್ಸೀಸ್
Published 19 ಮಾರ್ಚ್ 2022, 6:29 IST
Last Updated 19 ಮಾರ್ಚ್ 2022, 6:29 IST
‘ಎಂವಿ–22ಬಿ’ ವಿಮಾನದ ಸಂಗ್ರಹ ಚಿತ್ರ
‘ಎಂವಿ–22ಬಿ’ ವಿಮಾನದ ಸಂಗ್ರಹ ಚಿತ್ರ   

ಓಸ್ಲೋ:ಅಮೆರಿಕ ನೌಕಾಪಡೆಯ ತರಬೇತಿನಿರತ ವಿಮಾನವೊಂದು ನಾರ್ವೆಯಲ್ಲಿ ಸಂಪರ್ಕ ಕಡಿದುಕೊಂಡು ಶುಕ್ರವಾರ ರಾತ್ರಿ ನಾಪತ್ತೆಯಾಗಿದೆ.

ಶುಕ್ರವಾರ ರಾತ್ರಿ ‘ಎಂವಿ–22ಬಿ’ ವಿಮಾನವು ನಿಗದಿತ ಸಮಯಕ್ಕೆ ನಾರ್ವೆಯ ಬೋಡೊ ನಗರವನ್ನು ತಲುಪಿಲ್ಲ. ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಉತ್ತರ ನಾರ್ವೆಯ ‘ಜಂಟಿ ರಕ್ಷಣಾ ಸಹಕಾರ ಕೇಂದ್ರ’ ತಿಳಿಸಿದೆ.

ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಇದ್ದರು. ಚಳಿಗಾಲದ ಕಠಿಣ ಪರಿಸ್ಥಿತಿಗಳಲ್ಲಿ ಹೋರಾಡಲು ಸಿದ್ಧತೆಗಾಗಿ ನ್ಯಾಟೊ ಸದಸ್ಯ ರಾಷ್ಟ್ರಗಳ ಸೇನೆಗಳು ನಾರ್ವೆ ಪಡೆಗಳೊಂದಿಗೆ ಜಂಟಿ ತರಬೇತಿಯಲ್ಲಿ ಭಾಗವಹಿಸುತ್ತವೆ. ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಕೋಲ್ಡ್ ರೆಸ್ಪಾನ್ಸ್’ ಸೇನಾ ಕಾರ್ಯಾಚರಣೆಯಲ್ಲಿ ‘ಎಂವಿ–22ಬಿ’ ಭಾಗಿಯಾಗಿತ್ತು. ರಷ್ಯಾ–ಉಕ್ರೇನ್‌ ಸಂಘರ್ಷ ಆರಂಭವಾಗುವುದಕ್ಕೂ ಬಹಳಷ್ಟು ಹಿಂದೆಯೇ ಈ ತರಬೇತಿ ನಿಗದಿಯಾಗಿತ್ತು. ಈ ಕುರಿತು ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ನಾರ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.