ADVERTISEMENT

ನಾಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಭಾರತ ಪ್ರವಾಸ

ಮೇ 12ರಂದು ಆಗಮಿಸಲಿರುವ ಜಾನ್‌ ರಿಚರ್ಡ್ಸನ್‌

ಪಿಟಿಐ
Published 10 ಮೇ 2019, 18:44 IST
Last Updated 10 ಮೇ 2019, 18:44 IST
   

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನೌಕಾಪಡೆಯ ನಡುವಿನ ಬಾಂಧವ್ಯ ಬಲಗೊಳಿಸುವ ಉದ್ದೇಶದಿಂದ ಅಮೆರಿಕ ನೌಕಾಪಡೆ ಅಧ್ಯಕ್ಷ ಅಡ್ಮಿರಲ್‌ ಜಾನ್‌ ರಿಚರ್ಡ್ಸನ್‌ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಮೇ 12ಕ್ಕೆ ರಿಚರ್ಡ್ಸನ್‌ ಭಾರತಕ್ಕೆ ಭೇಟಿ ನೀಡಲಿದ್ದಾರೆ.ನೌಕಾಪಡೆಯ ಮುಖ್ಯಸ್ಥರಾದ ಬಳಿಕ ಭಾರತಕ್ಕೆ ಇದು ಇವರ ಎರಡನೇ ಭೇಟಿ. ಇಂಡೋ–ಪೆಸಿಫಿಕ್‌ ಡಭಾಗದಲ್ಲಿ ಚೀನಾ ತನ್ನಪ್ರಾಬಲ್ಯ ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ, ವಿವಾದಿತ‌ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ, ಅಮೆರಿಕ, ಫಿಲಿಪೈನ್ಸ್‌ ಹಾಗೂ ಜಪಾನ್‌ ನೌಕಾಪಡೆಗಳು ಮೊದಲ ಬಾರಿಗೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಪ್ರವಾಸ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ಸುನಿಲ್‌ ಲಾಂಬಾ ಹಾಗೂ ನೌಕಾಪಡೆ, ಸೇನೆ ಹಾಗೂ ರಾಷ್ಟ್ರೀಯ ಭದ್ರತಾ ವಿಭಾಗದಹಿರಿಯ ಅಧಿಕಾರಿಗಳನ್ನು ರಿಚರ್ಡ್ಸನ್‌ಭೇಟಿಯಾಗಲಿದ್ದಾರೆ.

ಭಾರತ ಹಾಗೂ ಅಮೆರಿಕ ನಡುವೆಪರಸ್ಪರ ಮಾಹಿತಿ ಹಂಚಿಕೆ, ಪಾಲುದಾರಿಕೆ ಬಲಗೊಳಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ತಮ್ಮ ನಿಲುವು, ಅಭಿಪ್ರಾಯಗಳ ಕುರಿತು ಆಗಾಗ್ಗೆ ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ರಿಚರ್ಡ್ಸನ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.