ADVERTISEMENT

ವಲಸೆ ವ್ಯವಸ್ಥೆ ಆಧುನೀಕರಣಕ್ಕೆ ಬೈಡನ್‌ ಒತ್ತು

ಶ್ವೇತನಭವನ ಅಧಿಕಾರಿಗಳ ಹೇಳಿಕೆ

ಪಿಟಿಐ
Published 26 ಫೆಬ್ರುವರಿ 2021, 6:07 IST
Last Updated 26 ಫೆಬ್ರುವರಿ 2021, 6:07 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ವಲಸೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು ಮುಖ್ಯ.ಈ ಕಾರ್ಯ ಬಹಳ ಹಿಂದೆಯೇ ಆಗಬೇಕಿತ್ತು ಎಂಬುದು ಅಧ್ಯಕ್ಷ ಜೋ ಬೈಡನ್‌ ಅವರ ಬಲವಾದ ನಂಬಿಕೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.

ಅದರಲ್ಲೂ, ಉನ್ನತ ಕೌಶಲ ಹೊಂದಿದ ಉದ್ಯೋಗಿಗಳು ಅಮೆರಿಕದಲ್ಲಿಯೇ ಉಳಿಯಲು ಪೂರಕವಾಗುವಂಥ ಕ್ರಮಗಳನ್ನು ಈ ವ್ಯವಸ್ಥೆ ಒಳಗೊಂಡಿರಬೇಕು ಎಂಬುದು ಸಹ ಬೈಡನ್‌ ಅವರ ಪ್ರತಿಪಾದನೆಯಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಹೇಳಿದ್ದಾರೆ.

‘ವಲಸೆ ವ್ಯವಸ್ಥೆಗೆ ಆಧುನೀಕರಣದ ಸ್ಪರ್ಶ ನೀಡಬೇಕು ಎನ್ನುವ ಬೈಡನ್‌ ಅವರ ಆಶಯ ಸಾಕಾರಗೊಳಿಸಲು ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಸಂಸದರ ಬೆಂಬಲ ಪಡೆಯಲು ನಾವು ಉತ್ಸುಕರಾಗಿದ್ದೇವೆ’ ಎಂದೂ ಅವರು ಹೇಳಿದರು.

ADVERTISEMENT

ಕೋವಿಡ್‌–19 ಪಿಡುಗಿನ ಕಾರಣ ನೀಡಿ, ಈ ಹಿಂದೆ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ ಕಾರ್ಡ್‌ ವಿತರಣೆ ಮೇಲೆ ನಿರ್ಬಂಧ ಹೇರಿದ್ದರು. ಆ ಮೂಲಕ ಕೌಶಲ ಹೊಂದಿದ ಉದ್ಯೋಗಿಗಳ ನೇಮಕಕ್ಕೆ ಹಿನ್ನಡೆ ಉಂಟಾಗಿತ್ತು. ಈ ನಿಷೇಧವನ್ನು ಅಧ್ಯಕ್ಷ ಬೈಡನ್‌ ಅವರು ರದ್ದುಗೊಳಿಸಿದ್ದಾರೆ. ಈ ಕ್ರಮದಿಂದ ಎಚ್‌–1ಬಿ ವೀಸಾ ಪಡೆದು, ಅಮೆರಿಕದ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಅನುಕೂಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.