ವಾಷಿಂಗ್ಟನ್: ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯ(ಆಸಿಯಾನ್) ನಾಯಕರ ಜತೆ ವಿಶೇಷ ಶೃಂಗಸಭೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಘೋಷಣೆ ಮಾಡಿದ್ದಾರೆ.
ಸಿಂಗಪುರ ಪ್ರಧಾನಿಲೀ ಸೀನ್ ಲೂಂಗ್ ಅವರ ಜತೆ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಶೇಷ ಶೃಂಗದ ಬಗ್ಗೆ ಘೋಷಣೆ ಮಾಡಲಾಗಿದೆ.ಆದರೆ ಈ ಶೃಂಗಸಭೆ ನಡೆಯುವ ದಿನಾಂಕ ಘೋಷಣೆ ಮಾಡಲಾಗಿಲ್ಲ.
'ಪ್ರಧಾನಿ ಲೀ ಮತ್ತು ನಾನು ಆಸಿಯಾನ್ ದೇಶಗಳ ಕುರಿತ ಬದ್ಧತೆಯ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಅಲ್ಲದೆ ವಾಷಿಂಗ್ಟನ್‌ನಲ್ಲಿ ಆಸಿಯಾನ್ ನಾಯಕರ ವಿಶೇಷ ಶೃಂಗ ಏರ್ಪಡಿಸಲು ನಿರ್ಧರಿಸಿದ್ದೇನೆ' ಎಂದು ಬೈಡನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.