ವಾಷಿಂಗ್ಟನ್ : ಭಾರತ ಮೂಲದ ಅಮೆರಿಕದ ರಾಜಕಾರಣಿ ನಿಕ್ಕಿ ಹ್ಯಾಲೆ ಅವರ ಪತಿಯ ಕುರಿತು ವೈಯಕ್ತಿಕ ಹೇಳಿಕೆ ನೀಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಜೋ ಬೈಡನ್ ಹರಿಹಾಯ್ದಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ನಿಕ್ಕಿ ಅವರು ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ದಕ್ಷಿಣ ಕೆರೊಲಿನಾದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಮಾತನಾಡಿದ್ದ ಟ್ರಂಪ್ ಅವರು, ’ನಿಕ್ಕಿ ಅವರ ಪತಿ ಎಲ್ಲಿದ್ದಾರೆ? ಓಹ್ ಅವರು ದೂರದಲ್ಲಿದ್ದಾರಲ್ಲ. ಅವರಿಗೇನಾಗಿದೆ?‘ ಎಂದು ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬೈಡನ್, ’ಮೇಜರ್ ಹ್ಯಾಲೆ ಅವರು ವಿದೇಶದಲ್ಲಿದ್ದಾರೆ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದಿದ್ದಾರೆ.
ಟ್ರಂಪ್ ಅವರ ಹೇಳಿಕೆಯು ಸೇನಾಪಡೆಯ ಪ್ರತಿಯೊಬ್ಬ ಯೋಧನಿಗೂ ಅಗೌರವ ಸೂಚಿಸುವಂತಿದೆ ಎಂದು ನಿಕ್ಕಿ ಪ್ರತಿಕ್ರಿಯಿಸಿದ್ದರು.
ನಿಕ್ಕಿ ಅವರ ಪತಿ ಹಾಗೂ ಸೌತ್ ಕೆರೊಲಿನಾ ನ್ಯಾಷನಲ್ ಗಾರ್ಡ್‌ನ ಅಧಿಕಾರಿ ಮೇಜರ್ ಮೈಕೆಲ್ ಹ್ಯಾಲೆ ಅವರು ಒಂದು ವರ್ಷದಿಂದ ಆಫ್ರಿಕಾದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.