ADVERTISEMENT

ಬ್ರಿಟನ್‌ ಪ್ರಧಾನಿ, ಮೆಕ್ಸಿಕೊ ಅಧ್ಯಕ್ಷರ ಜೊತೆಗೆ ಬೈಡನ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:51 IST
Last Updated 24 ಜನವರಿ 2021, 5:51 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಮತ್ತು ಮೆಕ್ಸಿಕೊ ಅಧ್ಯಕ್ಷರ ಜೊತೆಗೆ ದೂರವಾಣಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಕುರಿತು ಚರ್ಚಿಸಿದರು ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಬ್ರಿಟನ್‌ ಈ ಬಾರಿ ಜಿ–7 ಶೃಂಗಸಭೆ ಹಾಗೂ ಅಮೆರಿಕವು ಜಾಗತಿಕ ತಾಪಮಾನ ಬದಲಾವಣೆ (ಸಿಒಪಿ 26) ಕುರಿತು ಸಮ್ಮೇಳನವನ್ನು ಅಯೋಜಿಸಲಿವೆ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಬ್ರಿಟನ್ ಒಟ್ಟಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಿದರು.

ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವುದು, ವಹಿವಾಟು ಪುನರುಜ್ಜೀವನಗೊಳಿಸುವುದರ ಕುರಿತು ಚರ್ಚೆ ನಡೆಯಿತು. ಪರಸ್ಪರ ಸಹಕಾರ, ತಾಪಮಾನ ಬದಲಾವಣೆ, ಕೋವಿಡ್‌–19 ಸವಾಲುಗಳನ್ನು ಒಟ್ಟಾಗಿ ಎದುರಿಸುವ ಕುರಿತು ಚರ್ಚೆ ನಡೆಯಿತು.ಅಲ್ಲದೆ, ಉಭಯ ನಾಯಕರು ಇದರ ಜೊತೆಗೆ ಚೀನಾ, ಇರಾನ್‌, ರಷ್ಯಾ ಜೊತೆಗೆ ಹಂಚಿಕೊಳ್ಳಬಹುದಾದ ವಿದೇಶ ನೀತಿ ಆದ್ಯತೆಗಳನ್ನು ಕುರಿತು ಚರ್ಚಿಸಿದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ADVERTISEMENT

ಬೈಡನ್ ಇದರ ಜೊತೆಗೆ ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನ್ಯುಯೆಲ್‌ ಲೋಪೆಜ್ ಒಬ್ರೆಡರ್ ಅವರ ಜೊತೆಗೆ ಶುಕ್ರವಾರ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ವಲಸೆ ಕುರಿತಂತೆ ಚರ್ಚಿಸಿದರು. ಅಲ್ಲದೆ, ಕೋವಿಡ್–19 ಪಿಡುಗು ಹತ್ತಿಕ್ಕುವಲ್ಲಿ ಉಭಯ ದೇಶಗಳ ನಡುವಣ ಸಹಕಾರ ಕುರಿತು ಚರ್ಚೆ ನಡೆಯಿತು ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.