ADVERTISEMENT

ಕಮಲಾ ಹ್ಯಾರಿಸ್ ಜೊತೆಗಿನ ಸಂವಾದ ಮೋಸದಿಂದ ಕೂಡಿತ್ತು: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 11 ಸೆಪ್ಟೆಂಬರ್ 2024, 12:55 IST
Last Updated 11 ಸೆಪ್ಟೆಂಬರ್ 2024, 12:55 IST
<div class="paragraphs"><p>ಡೊನಾಲ್ಡ್ ಟ್ರಂ‍ಪ್</p></div>

ಡೊನಾಲ್ಡ್ ಟ್ರಂ‍ಪ್

   

– ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಕಮಲಾ ಹ್ಯಾರಿಸ್ ಹಾಗೂ ತಮ್ಮ ನಡುವೆ ‘ಎಬಿಸಿ ನ್ಯೂಸ್ ಚಾನೆಲ್’ ಏರ್ಪಡಿಸಿದ್ದ ಸಂವಾದ ಕುತಂತ್ರದಿಂದ ಕೂಡಿತ್ತು ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ADVERTISEMENT

‘ಸಂವಾದ ಮೋಸದಿಂದ ಕೂಡಿತ್ತು. ನೀವೊಮ್ಮೆ ಅದನ್ನು (ಸಂವಾದ) ಗಮನಿಸಿ. ನಾನು ಮಾತನಾಡಿದ ಪ್ರತಿಯೊಂದನ್ನು ನಿರ್ವಾಹಕರು ತಿದ್ದುತ್ತಿದ್ದರು. ಆದರೆ ಅವರದನ್ನು (ಕಮಲಾ) ಸರಿಪಡಿಸುತ್ತಿರಲಿಲ್ಲ’ ಎಂದು ಬಲಪಂಥೀಯ ವಿಚಾರಧಾರೆಯ ‘ಫಾಕ್ಸ್‌ ನ್ಯೂಸ್‌’ ಜೊತೆ ಅವರು ಹೇಳಿದ್ದಾರೆ.

ಸಂವಾದದ ಬಳಿಕ ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರು ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಟೇಲರ್ ಸ್ವಿಫ್ಟ್ ಅವರ ಅಭಿಮಾನಿಯಲ್ಲ. ಅವರು ತುಂಬಾ ಉದಾರ ವ್ಯಕ್ತಿ. ಅವರು ಪ್ರತಿಬಾರಿ ಡೆಮಕ್ರೆಟಿಕ್‌ ಅಭ್ಯರ್ಥಿಯನ್ನೇ ಅನುಮೋದಿಸುತ್ತಾರೆ. ಅವರು ಇದಕ್ಕಾಗಿ ಬೆಲೆ ತೆರುತ್ತಾರೆ’ ಎಂದು ಟ್ರಂಪ್ ಹೇಳಿದ್ದಾರೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.