ADVERTISEMENT

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಬೆಂಬಲ ಪುನರುಚ್ಚರಿಸಿದ ಅಮೆರಿಕ

ಪಿಟಿಐ
Published 13 ಸೆಪ್ಟೆಂಬರ್ 2024, 14:53 IST
Last Updated 13 ಸೆಪ್ಟೆಂಬರ್ 2024, 14:53 IST
ಲಿಂಡಾ ಥಾಮಸ್‌ –ಗ್ರೀನ್‌ಫೀಲ್ಸ್‌– ಎಎಫ್‌ಪಿ ಚಿತ್ರ
ಲಿಂಡಾ ಥಾಮಸ್‌ –ಗ್ರೀನ್‌ಫೀಲ್ಸ್‌– ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನ ಪಡೆಯಲು ಭಾರತ, ಜಪಾನ್ ಮತ್ತು ಜರ್ಮನಿಗೆ ಬೆಂಬಲ ನೀಡುವುದಾಗಿ ಅಮೆರಿಕ ಪುನರುಚ್ಚರಿಸಿದ್ದು, ಭದ್ರತಾ ಮಂಡಳಿಯ ಸುಧಾರಣೆಗೆ ಹೊಸ ಪ್ರಸ್ತಾಪಗಳನ್ನೂ ಪ್ರಕಟಿಸಿದೆ.  

ಆಫ್ರಿಕಾದ ದೇಶಗಳಿಗೆ ಶಾಶ್ವತವಲ್ಲದ ಸದಸ್ಯತ್ವದ ಜೊತೆಗೆ ಮಂಡಳಿಯಲ್ಲಿ ಆಫ್ರಿಕಾಕ್ಕೆ ಎರಡು ಶಾಶ್ವತ ಸ್ಥಾನಗಳನ್ನು ಸೃಷ್ಟಿಸುವ ಪ್ರಸ್ತಾವವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಅವರು ಗುರುವಾರ ಘೋಷಿಸಿದರು.

ಭಾರತ, ಜರ್ಮನಿ, ಮತ್ತು ಜಪಾನ್‌ಗೆ ಶಾಶ್ವತ ಸ್ಥಾನ ನೀಡಬೇಕೆಂದು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸುತ್ತಿರುವುದರ ಅರ್ಥವೇನು ಎಂದು ಸಂವಾದದ ವೇಳೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಥಾಮಸ್‌– ಗ್ರೀನ್‌ಫೀಲ್ಡ್‌, ‘ಜಿ 4 ರಾಷ್ಟ್ರಗಳ ಪೈಕಿ ಜಪಾನ್‌, ಜರ್ಮನಿ ಹಾಗೂ ಭಾರತಕ್ಕೆ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ. ಬ್ರೆಜಿಲ್‌ಗೆ ನಮ್ಮ ಬೆಂಬಲ ವ್ಯಕ್ತಪಡಿಸಿಲ್ಲ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಭದ್ರತಾ ಮಂಡಳಿಯಲ್ಲಿ ಭಾರತ ಇರಬೇಕು ಎಂಬುದನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಭಾರತಕ್ಕೆ ಕಾಯಂ ಸ್ಥಾನ ನಿರಾಕರಿಸಲು ಯಾವುದೇ ಆಧಾರಗಳಿಲ್ಲ’ ಎಂದು ಹೇಳಿದರು.  

ADVERTISEMENT

ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್‌ ಒಳಗೊಂಡಿರುವ ಜಿ4 ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಗಳಿಗಾಗಿ ಪರಸ್ಪರರನ್ನು ಬೆಂಬಲಿಸಿಕೊಂಡು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.