ವಾಷಿಂಗ್ಟನ್: ಪಾಕಿಸ್ತಾನದ ಗುರಿನಿರ್ದೇಶಿತ ಕ್ಷಿಪಣಿ ಯೋಜನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುವುದಕ್ಕೆ ಚೀನಾದ ಮೂರು ಕಂಪನಿಗಳು ಹಾಗೂ ಬೆಲಾರುಸ್‌ನ ಒಂದು ಕಂಪನಿಯ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
ಚೀನಾದ ಷಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲೆಪ್‌ಮೆಂಟ್, ತಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್‌ನ್ಯಾಷನಲ್ ಟ್ರೇಡ್ ಹಾಗೂ ಗ್ರಾನ್‌ಪೆಕ್ಟ್ ಕಂಪನಿ ಲಿಮಿಟೆಡ್, ಬೆಲಾರುಸ್‌ನ ಮಿನ್ಸ್ಕ್ ವೀಲ್ ಟ್ರ್ಯಾಕ್ಟರ್ ಪ್ಲಾಂಟ್ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿದೆ.
ಈ ಕಂಪನಿಗಳು ಸಮೂಹನಾಶಕ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಕೊಡುಗೆ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಅಮೆರಿಕವು ಹೇಳಿದೆ.
ಪಾಕಿಸ್ತಾನದ ಪಾಲಿಗೆ ನಂಬಿಕಸ್ಥ ಸ್ನೇಹಿತ ಆಗಿರುವ ಚೀನಾ, ಆ ದೇಶಕ್ಕೆ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಉಪಕರಣಗಳನ್ನು ಪೂರೈಸುತ್ತಿದೆ. ಬೆಲಾರುಸ್‌ನ ಕಂಪನಿಯು ಪಾಕಿಸ್ತಾನಕ್ಕೆ, ದೀರ್ಘ ವ್ಯಾಪ್ತಿಯ ಗುರಿನಿರ್ದೇಶಿತ ಕ್ಷಿಪಣಿಗಳ ಯೋಜನೆಗೆ ಅಗತ್ಯವಿರುವ ಚಾಸಿಗಳನ್ನು ಪೂರೈಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.