ವಾಷಿಂಗ್ಟನ್ : ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿಗೆ ಬಳಸುವ ಸಾಧನಗಗಳನ್ನು ಪೂರೈಕೆ ಮಾಡಿರುವ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ.
ಪಾಕಿಸ್ತಾನವು ಅಬಾಬೀಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಿದ ಕೆಲವು ದಿನಗಳ ನಂತರ ಅಮೆರಿಕ ಈ ನಿರ್ಬಂಧಗಳನ್ನು ಹೇರಿದೆ.
ಜನರಲ್ ಟೆಕ್ನಾಲಜಿ ಲಿಮಿಟೆಡ್, ಬೀಜಿಂಗ್ ಲುವೊ ಲುವೊ ಟೆಕ್ನಾಲಜಿ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ ಮತ್ತು ಚಾಂಗ್ಝೌ ಉಟೆಕ್ ಕಾಂಪೋಸಿಟ್ ಕಂಪನಿ ಲಿಮಿಟೆಡ್ ನಿರ್ಬಂಧಕ್ಕೆ ಗುರಿಯಾದ ಕಂಪನಿಗಳು.
ಜಾಗತಿಕ ನಿಶ್ಶಸ್ತ್ರೀಕರಣದ ಭಾಗವಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ. ಈಗ ಹೇರಲಾದ ನಿರ್ಬಂಧಗಳು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ, ಅವುಗಳ ವಿತರಣಾ ವಿಧಾನಗಳು ಮತ್ತು ಸಂಬಂಧಿತ ಖರೀದಿ ಚಟುವಟಿಕೆಗಳ ವಿರುದ್ಧ ಅಮೆರಿಕ ಬದ್ಧತೆಯಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.