ADVERTISEMENT

ಭಾರತದಿಂದ ಆರೋಗ್ಯ ಸಹಕಾರ: ಅಮೆರಿಕ ನಿರೀಕ್ಷೆ

ಪಿಟಿಐ
Published 23 ಫೆಬ್ರುವರಿ 2021, 7:35 IST
Last Updated 23 ಫೆಬ್ರುವರಿ 2021, 7:35 IST
ನೆಡ್‌ಪ್ರೈಸ್‌
ನೆಡ್‌ಪ್ರೈಸ್‌   

ವಾಷಿಂಗ್ಟನ್‌(ಪಿಟಿಐ): ಭಾರತದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಸಹಭಾಗಿತ್ವ ಹೆಚ್ಚಿಸಿಕೊಳ್ಳಲು ಒಡಂಬಡಿಕೆ (ಎಂಒಯು) ಪತ್ರವನ್ನು ಎದುರು ನೋಡುತ್ತಿರುವುದಾಗಿ ಅಮೆರಿಕ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್, ‘ಉಭಯ ದೇಶಗಳ (ಅಮೆರಿಕ ಮತ್ತು ಭಾರತ) ನಡುವಿನ ಆರೋಗ್ಯ ಸಹಕಾರವನ್ನು ವೃದ್ಧಿಸಲು ಸಿದ್ಧವಾಗಿದ್ದೇವೆ‘ ಎಂದು ಹೇಳಿದರು.

‘ಕೋವಿಡ್ 19 ವಿರುದ್ಧ ಹೋರಾಡುವುದು ಹಾಗೂ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಅಗತ್ಯ ಔಷಧಗಳ ಪ್ರಾಮುಖ್ಯವನ್ನು ಗುರುತಿಸಿ, ಅವುಗಳನ್ನು ತಯಾರಿಸಿ ಜಾಗತಿಕವಾಗಿ ಲಭ್ಯವಾಗುವಂತೆ ಮಾಡುತ್ತೇವೆ‘ ಎಂದು ಒಡಂಬಡಿಕೆಯ ಉದ್ದೇಶವನ್ನು ನೆಡ್‌ಪ್ರೈಸ್ ವಿವರಿಸಿದರು.

ADVERTISEMENT

'ವಿಶ್ವದ ಔಷಧಾಲಯ‘ ಎಂದು ಖ್ಯಾತಿ ಪಡೆದಿರುವ ಭಾರತವು ಜಾಗತಿಕವಾಗಿ ಶೇ 60 ರಷ್ಟು ಲಸಿಕೆಗಳನ್ನು ಉತ್ಪಾದಿಸುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊರೊನಾ ವಿರುದ್ಧದ ಲಸಿಕೆಗಳನ್ನು ಭಾರತವು ನೇಪಾಳ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಸೀಶೆಲ್ಸ್, ಮ್ಯಾನ್ಮಾರ್, ಮಾರಿಷಸ್, ಒಮನ್, ಸೌದಿ ಅರೇಬಿಯಾ, ಬಹ್ರೇನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತು ಮೊರಾಕ್ಕೊ ಸೇರಿದಂತೆ ಹಲವಾರು ದೇಶಗಳಿಗೆ ಕಳುಹಿಸಿದೆ‘ ಎಂದ ಉಲ್ಲೇಖಿಸಿದರು.

ಅಮೆರಿಕದಲ್ಲಿ ಸೋಮವಾರದ ಹೊತ್ತಿಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 5ಲಕ್ಷ ದಾಟಿದೆ. 2.8 ಕೋಟಿಯಷ್ಟು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಜಾನ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ಗುರುತಿಸಿದೆ.

ಭಾರತದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ 1,56,385. ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 1,10,05,850 ರಷ್ಟಿದೆ. ಇದು ಅತಿ ಹೆಚ್ಚು ಸೋಂಕಿನ ಪ್ರಕರಣಗಳಿರುವ ವಿಶ್ವದ ಎರಡನೇ ರಾಷ್ಟ್ರವಾಗಿದೆ. ಅಮೆರಿಕದ ನಂತರ ಹೆಚ್ಚು ಸೋಂಕಿನ ಪ್ರಕರಣಗಳಿರುವ ವಿಶ್ವದ ಎರಡನೇ ರಾಷ್ಟ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.