ADVERTISEMENT

ಭಾರತವನ್ನು ನಾಯಕನಾಗಿ ಅಮೆರಿಕ ಕಾಣುತ್ತದೆ: ಶ್ವೇತಭವನ

ಪಿಟಿಐ
Published 20 ಸೆಪ್ಟೆಂಬರ್ 2024, 14:25 IST
Last Updated 20 ಸೆಪ್ಟೆಂಬರ್ 2024, 14:25 IST
   

ವಾಷಿಂಗ್ಟನ್‌: ಭಾರತವನ್ನು ಕ್ವಾಡ್‌ ಒಕ್ಕೂಟದ ನಾಯಕ ರಾಷ್ಟ್ರವಾಗಿ ಅಮೆರಿಕ ಕಾಣುತ್ತದೆ ಮತ್ತು ನಾಲ್ಕು ರಾಷ್ಟ್ರಗಳ ಒಕ್ಕೂಟ ರಚನೆಗೆ ಭಾರತವು ಮಹತ್ವದ ಪಾತ್ರ ವಹಿಸಿರುವುದಕ್ಕೆ ಆಭಾರಿ ಎಂದು ಶ್ವೇತಭವನದ ಉನ್ನತ ಅಧಿಕಾರಿ ಮೀರಾ ರಾಪ್‌–ಹೂಪರ್‌ ಹೇಳಿದ್ದಾರೆ.

ಶ್ವೇತಭವನದ ಭದ್ರತಾ ಮಂಡಳಿಯಲ್ಲಿ ಪೂರ್ವ ಏಷ್ಯಾ ಮತ್ತು ಒಸಿನಿಯಾದ ಹಿರಿಯ ನಿರ್ದೇಶಕರಾಗಿರುವ ಅವರು, ಕ್ವಾಡ್‌ ಶೃಂಗಸಭೆಗೆ ಎರಡು ದಿನ ಇರುವ ಮಧ್ಯೆಯೇ ಈ ಹೇಳಿಕೆ ನೀಡಿದ್ದಾರೆ.

ಕ್ವಾಡ್‌ ಒಕ್ಕೂಟವು ಭಾರತ, ಆಸ್ಟ್ರೇಲಿಯಾ ಜಪಾನ್ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದೆ.

ADVERTISEMENT

ಶನಿವಾರ ನಡೆಯಲಿರುಯ ಶೃಂಗದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌, ಜಪಾನ್‌ ಪ್ರಧಾನಿ ಕಿಶಿದಾ ಫುಮಿನೊ ಅವರಿಗೆ ಆತಿಥ್ಯ ನೀಡಲಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.