ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ರಿಚರ್ಡ್ ವರ್ಮಾ ಅವರನ್ನು ಅಮೆರಿಕದ ವಿದೇಶಾಂಗ ಸಚಿವಾಲಯದ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದನ್ನು ಅಮೆರಿಕದ ಸೆನೆಟ್ ಖಚಿತಪಡಿಸಿದೆ.
ಗುರುವಾರ ಸೆನೆಟ್‌ನಲ್ಲಿ ವರ್ಮಾ ಅವರ ಪರವಾಗಿ 67 ಹಾಗೂ ವಿರೋಧವಾಗಿ 27 ಮತಗಳು ದೊರೆತಿದ್ದವು.
ವರ್ಮಾ ಅವರು 2015ರ ಜನವರಿ 16ರಿಂದ 2017ರ ಜನವರಿ 20ರವರೆಗೆ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅವರು ಮಾಸ್ಟರ್ ಕಾರ್ಡ್‌ನಲ್ಲಿ ಜಾಗತಿಕ ಸಾರ್ವಜನಿಕ ನೀತಿಯ ಮುಖ್ಯಸ್ಥ ಹಾಗೂ ಕಾನೂನು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.