ವಾಷಿಂಗ್ಟನ್ : ರಷ್ಯಾದ ಆಕ್ರಮಣದ ವಿರುದ್ಧ ಹೋರಾಟ ಮಾಡಲು ಉಕ್ರೇನ್‌ಗೆ ಅತ್ಯಗತ್ಯವಾದ ಶಸ್ತ್ರಾಸ್ತ್ರಗಳನ್ನು ಅಮೆರಿಕ ರವಾನಿಸಲು ಆರಂಭಿಸಿದೆ.
‘ರಷ್ಯಾಗೆ ಚೀನಾ, ಇರಾನ್ ಮತ್ತು ಉತ್ತರ ಕೊರಿಯಾ ನೆರವು ನೀಡುತ್ತಿವೆ. ಹೀಗಾಗಿ, ನಾವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಪುಟಿನ್ ಅವರ ಸ್ನೇಹಿತರು ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಪೂರೈಸುತ್ತಿದ್ದಾರೆ. ಇರಾನ್ ಡ್ರೋನ್‌ಗಳನ್ನು ಕಳುಹಿಸಿದೆ. ಉತ್ತರ ಕೊರಿಯಾ ಗುರಿ ನಿರ್ದೇಶಿತ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ರಷ್ಯಾಗೆ ಕಳುಹಿಸಿದೆ ಹಾಗೂ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ಉಪಕರಣಗಳನ್ನು ಒದಗಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
‘ಈ ದೇಶಗಳ ಬೆಂಬಲದಿಂದ ಉಕ್ರೇನ್ ನಗರಗಳ ಮೇಲೆ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಆದ್ದರಿಂದ, ಈ ದಾಳಿಯನ್ನು ಎದುರಿಸಲು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.