ADVERTISEMENT

ಅಮೆರಿಕದಿಂದ 66 ಎಫ್‌–16 ಯುದ್ಧ ವಿಮಾನ ಖರೀದಿಸಲಿರುವ ತೈವಾನ್‌: ಚೀನಾಗೆ ಆತಂಕ

ಏಜೆನ್ಸೀಸ್
Published 15 ಆಗಸ್ಟ್ 2020, 14:23 IST
Last Updated 15 ಆಗಸ್ಟ್ 2020, 14:23 IST
ಎಫ್‌–16 ವಿಮಾನ
ಎಫ್‌–16 ವಿಮಾನ   

ವಾಷಿಂಗ್ಟನ್‌:ಅತ್ಯಾಧುನಿಕ ಎಫ್‌–16 ಯುದ್ಧ ವಿಮಾನಗಳ ಖರೀದಿಗೆ ತೈವಾನ್‌ ಅಧಿಕೃತವಾಗಿ ಸಹಿ ಮಾಡಿರುವುದುಅಮೆರಿಕ ಮತ್ತು ಚೀನಾ ನಡುವಿನಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಅಮೆರಿಕದ ಲಾಕ್‌ಹೀಡ್‌ ಕಂಪೆನಿ ಎಫ್‌–16 ಯುದ್ಧ ವಿಮಾನಗಳನ್ನು ತಯಾರಿಸುತ್ತಿದ್ದು ತೈವಾನ್‌ ಎಫ್‌–16 ವಿಮಾನ ಖರೀದಿಗೆ ಮುಂದಾಗಿರುವುದನ್ನು 2026ರ ಅಂತ್ಯದ ವೇಳೆಗೆ ಸುಮಾರು 96 ಯುದ್ಧ ವಿಮಾನಗಳನ್ನು ತಯಾರಿಸುವುದಾಗಿ ಕಂಪನಿ ತಿಳಿಸಿದೆ.

1992ರಲ್ಲೇ ಎಫ್‌ ಸರಣಿಯ ಯುದ್ಧ ವಿಮಾನ ಖರೀದಿ ಬಗ್ಗೆ ಅಮೆರಿಕ ಮತ್ತು ತೈವಾನ್‌ ನಡುವೆ ಒಪ್ಪಂದವಾಗಿತ್ತು. ತೈವಾನ್‌ಗೆ ಎಫ್‌–16 ಯುದ್ಧ ವಿಮಾನ ನೀಡುವ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ADVERTISEMENT

ತೈವಾನ್‌ಗೆ ಯುದ್ಧ ವಿಮಾನಗಳು ಹಾಗೂ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಚೀನಾ ಬಲವಾಗಿ ತಾಕೀತು ಮಾಡಿತ್ತು. ಇಲ್ಲವಾದಲ್ಲಿ ಅಮೆರಿಕ ಎಲ್ಲಾ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು.

ಈಗಾಗಲೇ ಅಮೆರಿಕ ಸಂಸತ್ತಿನಲ್ಲಿ ತೈವಾನ್‌ಗೆ ಯುದ್ಧ ವಿಮಾನ ಮಾರಾಟ ಮಾಡುವ ಬಗ್ಗೆ ಕಳೆದ ವರ್ಷವೇ ಅನೌಪಚಾರಿಕವಾಗಿ ಒಪ್ಪಿಗೆ ಪಡೆಯಲಾಗಿತ್ತು ಎಂದು ಲಾಕ್‌ಹೀಡ್‌ ಕಂಪೆನಿಯ ಉನ್ನತ ಮೂಲಗಳು ತಿಳಿಸಿವೆ. ಜಾಗತಿಕವಾಗಿ 400 ಎಫ್‌–16 ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.