ADVERTISEMENT

ಭಾರತಕ್ಕೆ ಯುದ್ಧ ಪರಿಕರ ಮಾರಾಟ ಮಾಡಲು ಅಮೆರಿಕ ನಿರ್ಧಾರ

ಪಿಟಿಐ
Published 12 ಸೆಪ್ಟೆಂಬರ್ 2024, 15:36 IST
Last Updated 12 ಸೆಪ್ಟೆಂಬರ್ 2024, 15:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ವಾಷಿಂಗ್ಟನ್: ಜಲಾಂತರ್ಗಾಮಿ ದಾಳಿಯನ್ನು ತಡೆಯಬಲ್ಲ, ಅತಿ ಎತ್ತರದಲ್ಲಿಯೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇರುವ, ಅಂದಾಜು ₹ 443.32 ಕೋಟಿ ಮೌಲ್ಯದ (52.8 ಮಿಲಿಯನ್‌ ಡಾಲರ್) ‘ಸೊನೊಬ್ಯೊ’ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ತೀರ್ಮಾನಿಸಿದೆ.   

‘ಸೊನೊಬ್ಯೊ’ ಆಗಸದಲ್ಲಿ ಕಾರ್ಯನಿರ್ವಹಿಸುವ, ವಿಸ್ತಾರವಾಗುವ ಸಾಮರ್ಥ್ಯ ಇರುವ, ವಿದ್ಯುನ್ಮಾನ ಮತ್ತು ಯಾಂತ್ರಿಕ ಸಂವೇದಿ ಪರಿಕರವಾಗಿದೆ. ನೀರಿನ ಆಳದಲ್ಲಿನ ಶಬ್ದ ಮತ್ತು ಕಂಪನಗಳನ್ನು ಇದು ಗ್ರಹಿಸಲಿದೆ. ಇವು, ಪರಿಣಾಮಕಾರಿ ಜಲಾಂತರ್ಗಾಮಿ ನಿರೋಧಕಗಳಾಗಿಯೂ ಕಾರ್ಯನಿರ್ವಹಿಸಬಲ್ಲವು.    

ADVERTISEMENT

‘ಸೊನೊಬ್ಯೊಗಳನ್ನು ಸೇನೆಗೆ ನಿಯೋಜನೆ ಮಾಡಲು ಭಾರತಕ್ಕೆ ತೊಡಕೇನೂ ಆಗದು’ ಎಂದು ಸ್ಥಳೀಯ ರಕ್ಷಣಾ ಭದ್ರತಾ ಸಹಕಾರ ಏಜೆನ್ಸಿ ತಿಳಿಸಿದೆ. ಈ ಕುರಿತು ಅಮೆರಿಕ ಸೆನೆಟ್‌ನ ವಿದೇಶಾಂಗ ಬಾಂಧವ್ಯ ಸಮಿತಿಗೆ ಮಾಹಿತಿಯನ್ನು ನೀಡಿದೆ.

ಅಮೆರಿಕದ ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯ ಅನುಸಾರ, ಅಮೆರಿಕದ ಜನ ಪ್ರತಿನಿಧಿಗಳ ಸಭೆಯು ಈ ವಹಿವಾಟಿನ ಕುರಿತು ಮರುಪರಿಶೀಲನೆ ನಡೆಸಲು 30 ದಿನ ಕಾಲಾವಕಾಶವಿದೆ.

ಸೆನೆಟ್‌ ಸಮಿತಿಗೆ ನೀಡಿರುವ ಮಾಹಿತಿ ಅನುದಾರ, ಭಾರತವು ಎನ್‌/ಎಸ್‌ಎಸ್‌ಕ್ಯೂ–530 ಸರಿ ಮೂರು ಮಾದರಿಯ ಸೊನೊಬ್ಯೊ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿತ್ತು. ಈ ಪ್ರಸ್ತಾವಕ್ಕೆ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಆ. 23ರಂದು ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.