ADVERTISEMENT

ಭಾರತದ ಜತೆ ರಕ್ಷಣಾ ಸಹಭಾಗಿತ್ವ ಮುಂದುವರಿಕೆ: ಅಮೆರಿಕ

ಪಿಟಿಐ
Published 6 ಅಕ್ಟೋಬರ್ 2023, 11:36 IST
Last Updated 6 ಅಕ್ಟೋಬರ್ 2023, 11:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಾಷಿಂಗ್ಟನ್‌: ‘ರಕ್ಷಣಾ ಸಹಭಾಗಿತ್ವ ವಿಚಾರದಲ್ಲಿ ದೇಶವು ಭಾರತದೊಂದಿಗೆ ಹೊಂದಿರುವ ಪಾಲುದಾರಿಕೆಗೆ ಮಹತ್ವ ಇದೆ. ಈ  ಕ್ಷೇತ್ರದಲ್ಲಿ ಮತ್ತಷ್ಟು ಬಲವಾದ ಪಾಲುದಾರಿಕೆ ಮುಂದುವರಿಯಲಿದೆ’ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪೆಂಟಗನ್‌ ಮಾಧ್ಯಮ ಕಾರ್ಯದರ್ಶಿ ಪ್ಯಾಟ್‌ ರೈಡರ್‌ ಅವರು ಈ ವಿಷಯ ತಿಳಿಸಿದ್ದಾರೆ. 

ADVERTISEMENT

‘1997ರಲ್ಲಿ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ವ್ಯಾಪಾರವು ಬಹುತೇಕ ನಗಣ್ಯವಾಗಿತ್ತು. ಇಂದು ಅದು ₹1.66 ಲಕ್ಷ ಕೋಟಿಗೂ (20 ಶತಕೋಟಿ ಡಾಲರ್‌) ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತ್ವ ಗೌರವಿಸುವ, ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ಮೂಲಕ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಂಡು ಬರಲಾಗಿದೆ. ಈ ವಿಷಯದಲ್ಲಿ ಭಾರತ ಮತ್ತು ಇತರ ದೇಶಗಳೊಂದಿಗೆ ನಾವು ಹೊಂದಿರುವ ಪಾಲುದಾರಿಕೆಯನ್ನು ಗೌರವಿಸುತ್ತೇವೆ’ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಡರ್, ಅಮೆರಿಕ ರಕ್ಷಣಾ ಇಲಾಖೆಯು ಚೀನಾದಿಂದ ನಿರಂತರ ಸವಾಲು ಎದುರಿಸುತ್ತಿದೆ ಎಂದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಫಲಪ್ರದವಾದ ಮಾತುಕತೆ ನಡೆಸಿದ ಕೆಲವು ದಿನಗಳ ನಂತರ ರೈಡರ್ ಅವರಿಂದ ಈ ಹೇಳಿಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.