ADVERTISEMENT

ಯುದ್ಧ ಸಾಮಗ್ರಿ ಅಭಿವೃದ್ಧಿ: ಭಾರತದೊಂದಿಗೆ ಕೈಜೋಡಿಸಲು ಅಮೆರಿಕ ಸಿದ್ಧತೆ

ಪಿಟಿಐ
Published 20 ಜುಲೈ 2023, 16:36 IST
Last Updated 20 ಜುಲೈ 2023, 16:36 IST

ವಾಷಿಂಗ್ಟನ್‌: ಸುಧಾರಿತ ಫಿರಂಗಿಗಳು ಮತ್ತು ಯುದ್ಧ ವಾಹನಗಳನ್ನು ಅಭಿವೃದ್ಧಿಪಡಿಸಲು ಭಾರತದೊಂದಿಗೆ ಕೈಜೋಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಮೆರಿಕ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ಪೆಂಟಗನ್‌ನ (ಅಮೆರಿಕ ಸೇನೆಯ ಮುಖ್ಯ ಕಚೇರಿ) ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಂಘರ್ಷ ನಡೆಯುತ್ತಿದೆ. ಚೀನಾ ಒಡ್ಡುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಭಾರತವು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಅಮೆರಿಕ ಈ ಹೆಜ್ಜೆ ಇರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯನ್ನು ನಿವಾರಿಸುವ ನಿಟ್ಟಿನಲ್ಲಿ ತನ್ನ ಮಿತ್ರ ದೇಶಗಳಿಗೆ ಸಹಕಾರ ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವು ತೆಗೆದುಕೊಂಡಿರುವ ಕ್ರಮಗಳ ಭಾಗವಾಗಿ ಈ ರೂಪುರೇಷೆ ತಯಾರಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ADVERTISEMENT

ವಾಣಿಜ್ಯ, ಮಾನವ ಹಕ್ಕುಗಳು ಮುಂತಾದ ಕಾರಣಗಳಿಗಾಗಿ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಳಸಿರುವ ವೇಳೆಯೇ ಪೆಂಟಗನ್‌ ಈ ಹೇಳಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.