ವಾಷಿಂಗ್ಟನ್: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವಿಗೆ ಭಾರತ ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಕಾರಣ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್‌ಸಿಐಆರ್‌ಎಫ್) ಆರೋಪಿಸಿದೆ.
‘ಸ್ವಾಮಿಯವರ ಸಾವು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಅತಿಯಾಗಿ ನಡೆಯುತ್ತಿರುವ ಕಿರುಕುಳಕ್ಕೆ ಸ್ಪಷ್ಟ ನಿದರ್ಶನವಾಗಿದೆ‘ ಎಂದು ಯುಎಸ್‌ಸಿಐಆರ್‌ಎಫ್ ಅಧ್ಯಕ್ಷೆ ನಾದಿನ್ ಮಯೇಂಜಾ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸ್ವಾಮಿ ಅವರ ಬಗ್ಗೆ ಭಾರತ ಉದ್ದೇಶ ಪೂರ್ವಕವಾಗಿ ತೋರಿದ ನಿರ್ಲಕ್ಷ್ಯ ಮತ್ತು ಅವರನ್ನೇ ಗುರಿಯಾಗಿಸಿಕೊಂಡು ನೀಡಿದ ಕಿರುಕುಳವೇ ಅವರ ಸಾವಿಗೆ ಕಾರಣವಾಗಿದೆ‘ ಎಂದು ಆಯೋಗ ಕಟುವಾದ ಮಾತುಗಳಲ್ಲಿ ಖಂಡಿಸಿದೆ.
ಇದೇ ವೇಳೆ ಮಯೇಂಜಾ, ‘ಭಾರತ ಮತ್ತು ಅಮೆರಿಕದ ನಡುವೆ ನಡೆಯುವ ದ್ವಿಪಕ್ಷೀಯ ಸಂಬಂಧದ ಮಾತುಕತೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕಾಳಜಿ ಕುರಿತು ಚರ್ಚಿಸುವ ಜತೆಗೆ, ಈ ಪ್ರಕರಣಕ್ಕೆ ಭಾರತವನ್ನೇ ಉತ್ತರದಾಯಿಯಾಗಿಸಬೇಕು‘ ಎಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.