ನ್ಯೂಯಾರ್ಕ್:ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ವಿಶ್ವವಿದ್ಯಾಲಯದಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್-19ಲಸಿಕೆಯು ಸುರಕ್ಷಿತವಾಗಿದೆ ಎಂದುಯೂರೋಪಿಯನ್ ಮೆಡಿಸಿನ್ ಏಜೆನ್ಸಿ (ಇಎಂಎ) ತಿಳಿಸಿದೆ.
ಲಸಿಕೆ ಪಡೆದವರಲ್ಲಿರಕ್ತ ಹೆಪ್ಪುಗಟ್ಟುವುದು ಸೇರಿದಂತೆ, ಜ್ವರ, ಎದೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡಿರುವ ಬಗ್ಗೆವರದಿಯಾಗಿವೆ. ಹೀಗಾಗಿ ಯುರೋಪ್‌ನ ಅತಿ ದೊಡ್ಡ ರಾಷ್ಟ್ರಗಳಾದಜರ್ಮನಿ,ಇಟಲಿ ಮತ್ತುಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಈ ವಾರದ ಆರಂಭದಲ್ಲಿಅಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಇಎಂಎ ಕಾರ್ಯರ್ನಿರ್ವಾಹಕ ನಿರ್ದೇಶಕ ಎಮರ್ ಕೂಕ್, ʼತಜ್ಞರು ಸ್ಪಷ್ಟ ವೈಜ್ಞಾನಿಕ ತೀರ್ಮಾನಕ್ಕೆ ಬಂದಿದ್ದಾರೆ. ಇದು (ಲಸಿಕೆ) ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆʼ ಎಂದು ತಿಳಿಸಿದ್ದಾರೆ.
ರಕ್ತ ಹೆಪ್ಪಗಟ್ಟುವಿಕೆ ಮತ್ತು ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡಿರುವಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತದ ಸಂಶೋಧಕರುಇಎಂಎ ತಜ್ಞರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದಾಗ್ಯೂ ಒಟ್ಟಾರೆಯಾಗಿ ಲಸಿಕೆಯು ಸುರಕ್ಷಿತವಾಗಿದ್ದು, ಯುರೋಪ್ ಹಾಗೂ ಇತರಕಡೆಗಳಿಗೆ ತಲುಪಿಸಬಹುದಾಗಿದೆ ಎಂದು ಎಮರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು,ಜನರು ಗಾಬರಿಪಡುವಅಗತ್ಯವಿಲ್ಲ. ಲಸಿಕೆ ಕೆಲವರಲ್ಲಿ ಮಾತ್ರ ಅಡ್ಡಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆ ತಜ್ಞೆ ಸೌಮ್ಯ ಸ್ವಾಮಿನಾಥನ್ ಹೇಳಿದ್ದರು.
ಸದ್ಯ ನಿಷೇಧ ಹೇರಿರುವ ರಾಷ್ಟ್ರಗಳು ಲಸಿಕೆ ವಿತರಣೆ ಕಾರ್ಯವನ್ನು ಪುನರಾರಂಭಿಸಲಿವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಲಸಿಕೆಯ ದತ್ತಾಂಶಗಳನ್ನು ಪರಾಮರ್ಶೆಗೆ ಒಳಪಡಿಸಲಾಗುವುದು ಎಂದು ಅಸ್ಟ್ರಾಜೆನೆಕಾ ಕಂಪನಿಯ ವಕ್ತಾರರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.