ADVERTISEMENT

ನಾನು ಹ್ಯಾರಿಸ್ ಮೇಲೆ ತುಂಬಾನೇ ಕೋಪಗೊಂಡಿದ್ದೇನೆ: ಡೊನಾಲ್ಡ್ ಟ್ರಂಪ್

ಪಿಟಿಐ
Published 16 ಆಗಸ್ಟ್ 2024, 1:59 IST
Last Updated 16 ಆಗಸ್ಟ್ 2024, 1:59 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ತುಂಬಾನೇ ಕೋಪಗೊಂಡಿರುವುದಾಗಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ADVERTISEMENT

'ಆಕೆಯ (ಹ್ಯಾರಿಸ್) ಬಗ್ಗೆ ನನಗೆ ಕಿಂಚಿತ್ತು ಗೌರವ ಇಲ್ಲ. ಆಕೆಯ ಬುದ್ಧಿಶಕ್ತಿಯ ಬಗ್ಗೆಯೂ ನನಗೆ ಗೌರವವಿಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕೆ ಗೆದ್ದರೆ ಕೆಟ್ಟ ಅಧ್ಯಕ್ಷೆಯಾಗುತ್ತಾರೆ ಎಂದು ನಾನು ನಂಬಿದ್ದೇನೆ. ಹಾಗಾಗಿ ನಾವು ಗೆಲ್ಲುವುದು ಅತಿ ಮುಖ್ಯ' ಎಂದು ಹೇಳಿದ್ದಾರೆ.

'ವೈಯಕ್ತಿಕವಾಗಿ ದಾಳಿ ಮಾಡುವುದು ಒಳ್ಳೆಯದೋ ಅಥವಾ ಕೆಟ್ಟದ್ದಾಗಿರಲಿ. ಆಕೆ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಾರೆ' ಎಂದು ನ್ಯೂಜೆರ್ಸಿಯಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

ಕಮಲಾ ಹ್ಯಾರಿಸ್ ಮೇಲೆ ವೈಯಕ್ತಿಕ ದಾಳಿ ಮಾಡುವುದು ಸರಿಯಲ್ಲ ಎಂದು ಒತ್ತಾಯಿಸಿದ ತಮ್ಮದೇ ಪಕ್ಷದ ಸದಸ್ಯರಿಗೆ ಟ್ರಂಪ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

'ವೈಯಕ್ತಿಕ ದಾಳಿಯ ವಿಚಾರದ ಬಗ್ಗೆ ಹೇಳುವುದಾದರೆ ನಾನು ಕಮಲಾ ಹ್ಯಾರಿಸ್ ಮೇಲೆ ತುಂಬಾನೇ ಕೋಪಕೊಂಡಿದ್ದೇನೆ. ದೇಶಕ್ಕಾಗಿ ಅವರು ಏನು ಮಾಡಿದ್ದಾರೆ? ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ನನ್ನ ವಿರುದ್ಧ ಅಸ್ತ್ರವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ಅವರ ವಿರುದ್ಧ ತುಂಬಾನೇ ಆಕ್ರೋಶಗೊಂಡಿದ್ದೇನೆ. ವೈಯಕ್ತಿಕ ದಾಳಿಗೆ ಒಳಗಾಗಲು ಆಕೆ ಅರ್ಹರು' ಎಂದು ಹೇಳಿದ್ದಾರೆ.

ಹ್ಯಾರಿಸ್ ಅವರ ನೀತಿಯು ವಿಚಿತ್ರಿವೆನಿಸಿದೆ ಎಂದು ಸಹ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಲ್ಲಿ ನವೆಂಬರ್ 5ಕ್ಕೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.