ಹನೋಯಿ: ವಿಯೆಟ್ನಾಂ ಅಧ್ಯಕ್ಷ ವೊ ವಾನ್ ಥೌಂಗ್ ರಾಜೀನಾಮೆ ನೀಡಿದ್ದಾರೆ ಎಂದು ಕಮ್ಯುನಿಷ್ಟ್ ಪಾರ್ಟಿ ಬುಧವಾರ ತಿಳಿಸಿದೆ.
ಭ್ಟಷ್ಟಾಚಾರ ವಿರೋಧಿ ಆಂದೋಲನವು ತೀವ್ರಗೊಂಡ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಕೇಂದ್ರ ಸಮಿತಿಯು ರಾಜೀನಾಮೆಯನ್ನು ಸ್ವೀಕರಿಸಿದ್ದು, ‘ವೊ ವಾನ್ ಥೌಂಗ್ ಅವರಿಂದಾದ ಈ ಉಲ್ಲಂಘನೆಯು ಕಮ್ಯುನಿಷ್ಟ್ ಪಕ್ಷದ ಘನತೆಗೆ ಕಪ್ಪುಚುಕ್ಕೆ’ ಎಂದು ಹೇಳಿದೆ.
ಥೌಂಗ್ ಅವರು ಮಾರ್ಚ್ 2023ರಲ್ಲಿ ವಿಯೆಟ್ನಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.