ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗಿಂತ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅವಕಾಶಗಳು ಹೆಚ್ಚಾಗಿವೆ ಎಂದು ಸಿಎನ್‌ಎನ್ ಸಮೀಕ್ಷೆ ತಿಳಿಸಿದೆ.
ಕಳೆದ ವಾರ ಅಟ್ಲಾಂಟದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಹಿನ್ನಡೆ ಸಾಧಿಸಿದ ಬಳಿಕ ಜೋ ಬೈಡನ್ ಜನಪ್ರಿಯತೆ ಕುಸಿದಿದೆ.
ಸಿಎನ್‌ಎನ್ ಸಮೀಕ್ಷೆ ಪ್ರಕಾರ ಟ್ರಂಪ್ ಅವರು ಬೈಡನ್‌ಗಿಂತ ಆರು ಅಂಕ ಮುಂದಿದ್ದಾರೆ.
‘ಟ್ರಂಪ್ ಅವರು ಶೇಕಡ 47ರಷ್ಟು ಮತದಾರರ ಬೆಂಬಲವನ್ನು ಹೊಂದಿದ್ದು, ಕಮಲಾ ಅವರಿಗೆ ಹಿನ್ನಡೆಯಾಗಿದೆ. ಆದರೆ, ಉಳಿದ ಭಾಗಗಳಲ್ಲಿ ಮಹಿಳೆಯರ ಬೆಂಬಲ ದೊರೆತರೆ ಕಮಲಾ ಅವರು ಟ್ರಂಪ್ ಅವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ’ ಎಂದು ಸಿಎನ್‌ಎನ್ ಸಮೀಕ್ಷೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.