ADVERTISEMENT

ರಷ್ಯಾ: ಸಂದಿಗ್ಧತೆಯಲ್ಲಿ ವ್ಯಾಗ್ನರ್ ಪಡೆಗಳ ಸಾಗರೋತ್ತರ ಕಾರ್ಯಾಚರಣೆ

ಎಎಫ್‌ಪಿ
Published 26 ಜೂನ್ 2023, 13:36 IST
Last Updated 26 ಜೂನ್ 2023, 13:36 IST
ವ್ಯಾಗ್ನರ್‌ ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಝಿನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ವ್ಯಾಗ್ನರ್‌ ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಝಿನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಪ್ಯಾರಿಸ್‌: ಖಾಸಗಿ ಸೇನಾ ಗುಂಪು ‘ವ್ಯಾಗ್ನರ್‌’ ಅನ್ನು ರಷ್ಯಾವು ಈ ಹಿಂದೆ ಸಿರಿಯಾ ಮತ್ತು ಆಫ್ರಿಕಾ ದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಬಳಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

‘ವ್ಯಾಗ್ನರ್‌’ನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ರಷ್ಯಾದ ವಿರುದ್ಧವೇ ಬಂಡಾಯ ಪ್ರಯತ್ನ ನಡೆಸಿ ವಿಫಲಗೊಂಡ ಬಳಿಕ ಈ ಪಡೆಯ ಸಾಗರೋತ್ತರ ಕಾರ್ಯಾಚರಣೆಯ ಬಗ್ಗೆ ಇದೀಗ ಪ್ರಶ್ನೆಗಳು ಎದ್ದಿವೆ ಎಂದೂ ಹೇಳಿವೆ.

‘ವ್ಯಾಗ್ನರ್‌’ ಪಡೆಗಳ ಸಾಗರೋತ್ತರ ಉಪಸ್ಥಿತಿಯನ್ನು ಗಮನಿಸಿದರೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಮೇಲೆ ಇದು ಹೆಚ್ಚಿನ ಪರಿಣಾಮ ಬಿರಬಹುದು ಎಂದು ‘ಫಾರಿನ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್‌’ನ ರಾಬ್‌ ಲೀ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ವ್ಯಾಗ್ನರ್‌ ಪಡೆಗಳು ಆಫ್ರಿಕಾದಾದ್ಯಂತ ದೊಡ್ಡ ಉಪಸ್ಥಿತಿ ಹೊಂದಿದ್ದು, ಇದರಿಂದ ಆ ದೇಶಕ್ಕೆ ಪ್ರಯೋಜನವಿದೆ. ಪ್ರಿಗೋಷಿನ್‌ ಮತ್ತು ವ್ಯಾಗ್ನರ್‌ ಯೋಧರು ಬೆಲರೂಸ್‌ಗೆ ತೆರಳಿದರೆ ಅವರನ್ನು ರಷ್ಯಾ ಈ ಹಿಂದಿನಂತೆ ಮತ್ತೆ ಸಾಗರೋತ್ತರ ಕಾರ್ಯಾಚರಣೆಗಳಿಗೆ ಕಳುಹಿಸಲಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ ಎಂದೂ ಅವರು ಹೇಳಿದ್ದಾರೆ.

ವ್ಯಾಗ್ನರು ಯೋಧರು ಆಫ್ರಿಕಾದಲ್ಲಿ ಕಾರ್ಯಾಚರಣೆಯ ಹಿಂದೆ ರಷ್ಯಾದ ಹಿತಾಸಕ್ತಿಯೂ ಅಡಗಿರುವುದರಿಂದ ಅವರನ್ನು ಮತ್ತೆ ಹಿಂದಿನಂತೆ ನಿಯೋಜನೆಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

2015ರಲ್ಲಿ ಸಿರಿಯಾದ ಆಂತರಿಕ ಯುದ್ಧದ ಸಂದರ್ಭದಲ್ಲಿ ವ್ಯಾಗ್ನರ್‌ ಯೋಧರು ವಿಶೇಷ ಪಡೆಗಳ ರಿತಿಯಲ್ಲಿ ಅಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.