ಇಸ್ಲಾಮಾಬಾದ್: ದೇಶದಲ್ಲಿ ಶಾಂತಿ ನೆಲೆಸ ಬೇಕಾ ದರೆಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು ಎಂದು ಪಾಕಿಸ್ತಾನ ಸೇನೆ ಮುಖ್ಯಸ್ಥ ಖಮಾರ್ ಜಾವೇದ್ ಬಜ್ವಾ ಶನಿವಾರ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ನಡೆಸಿದ ‘ರದ್ ಉಲ್ ಫಸಾದ್’ (ಹಿಂಸೆಯ ತಿರಸ್ಕಾರ) ಕಾರ್ಯಾಚರಣೆಯ ಮೂರನೇ ವರ್ಷಾಚರಣೆಯಲ್ಲಿ ಅವರು ಮಾತನಾಡಿದರು.
‘ಗಡಿಯಲ್ಲಿ ಭದ್ರತೆ ಹೆಚ್ಚಿಸುವುದು ಮತ್ತು ಭಯೋತ್ಪಾದನೆಯನ್ನು ಕೊನೆಗಾಣಿಸುವುದಕ್ಕೆ ಸೇನೆ ಬದ್ಧವಾಗಿದೆ. ಪ್ರವಾಸೋದ್ಯಮ ಮತ್ತೆ ನೆಲೆಗೊಳ್ಳಲು ಭದ್ರತಾ ಪಡೆಗಳು, ಗುಪ್ತಚರ ವಿಭಾಗದ ಕೊಡುಗೆ ಅನನ್ಯ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.