ADVERTISEMENT

ನೋಡಿ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಡ್ರಮ್ಸ್‌ ಬಾರಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2021, 5:21 IST
Last Updated 3 ನವೆಂಬರ್ 2021, 5:21 IST
ಗ್ಲಾಸ್ಗೋದಲ್ಲಿ ಪ್ರಧಾನಿ ನರೇಂದ್ರ ಮೋದಿ
ಗ್ಲಾಸ್ಗೋದಲ್ಲಿ ಪ್ರಧಾನಿ ನರೇಂದ್ರ ಮೋದಿ   

ಗ್ಲಾಸ್ಗೋ: ವಿಶ್ವ ಸಂಸ್ಥೆಯ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಿಂದ ಹೊರಡುವ ಮುನ್ನ ಭಾರತೀಯ ಸಮುದಾಯದವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಮೋದಿ ಡ್ರಮ್ಸ್‌ ಬಾರಿಸುತ್ತ ಸಂಗೀತ ಮೇಳದ ತಾಳದೊಂದಿಗೆ ಬೆರೆತರು.

ಮಂಗಳವಾರ ಪ್ರಧಾನಿ ಮೋದಿ ಭಾರತಕ್ಕೆ ಮರಳುವ ಮುನ್ನ ಭಾರತೀಯ ಸಮುದಾಯದವರನ್ನು ಭೇಟಿಯಾದರು. ಸಾಂಪ್ರದಾಯಿಕ ಶೈಲಿಯ ಕುರ್ತಾ ಪೈಜಾಮ, ಪೇಟ ಧರಿಸಿದ್ದ ಭಾರತೀಯ ಮೂಲದವರು ಪ್ರಧಾನಿಗೆ ಕೈಮುಗಿದು, ಕೈಕುಲಿಕೆ, ಸಂಗೀತ ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು.

ಗ್ಲಾಸ್ಗೋದಲ್ಲಿ ಹೊಟೇಲ್‌ನಿಂದ ಹೊರಬರುವಾಗ ಪ್ರಧಾನಿಗೆ ಭಾರತೀಯರು ಎದುರಾದರು. ಹಲವು ಮಕ್ಕಳೊಂದಿಗೆ ಕೆಲವು ಕ್ಷಣ ಮೋದಿ ಮಾತನಾಡುತ್ತ, ಗಲ್ಲ ಸವರಿ ಹೆಸರು ಕೇಳುತ್ತ ನಿಂತರು. ಕೈಹಿಡಿದು, ಕೈಕುಲುಕಿ, ಹೈ–ಫೈವ್ ಸಹ ಕೊಟ್ಟರು. ಹಾಗೇ ಮುಂದೆ ಸಾಗುತ್ತ ಸಂಗೀತ ಮೇಳದೊಂದಿಗೆ ಸೇರಿ ತಾವೂ ಡ್ರಮ್ಸ್‌ ಬಾರಿಸಿದರು.

ADVERTISEMENT

ಇಂದು ಬೆಳಿಗ್ಗೆ ಪ್ರಧಾನಿ ಭಾರತಕ್ಕೆ ವಾಪಸ್‌ ಆಗಿದ್ದಾರೆ. ಮೋದಿ ಅವರು ಇಟಲಿಯ ರೋಮ್‌, ವ್ಯಾಟಿಕನ್‌ ಸಿಟಿ ಹಾಗೂ ಗ್ಲಾಸ್ಗೋಗೆ ಭೇಟಿ ನೀಡಿದ್ದರು.

‘ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವ ನೆಟ್‌ ಝೀರೋ ಗುರಿಯನ್ನು ಭಾರತವು 2070ಕ್ಕೆ ತಲುಪಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.