ADVERTISEMENT

ಜನಾಂಗೀಯ ದಾಳಿಗೆ ನಮ್ಮ ವಿರೋಧ ಇದೆ: ಬಾಂಗ್ಲಾ ಹಿಂಸಾಚಾರ ಬಗ್ಗೆ ವಿಶ್ವಸಂಸ್ಥೆ

ಪಿಟಿಐ
Published 9 ಆಗಸ್ಟ್ 2024, 4:47 IST
Last Updated 9 ಆಗಸ್ಟ್ 2024, 4:47 IST
<div class="paragraphs"><p>ವಿಶ್ವಸಂಸ್ಥೆ</p></div>

ವಿಶ್ವಸಂಸ್ಥೆ

   

(ರಾಯಿಟರ್ಸ್ ಚಿತ್ರ)

ವಿಶ್ವಸಂಸ್ಥೆ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಜನಾಂಗೀಯ ದಾಳಿ ಅಥವಾ ಹಿಂಸೆಗೆ ಪ್ರಚೋದನೆಗೆ ನೀಡುವ ಕೃತ್ಯಗಳನ್ನು ನಾವು ವಿರೋಧಿಸುತ್ತೇವೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ.

ADVERTISEMENT

‘ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಬೇಕು ಎನ್ನುವುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಜನಾಂಗೀಯ ಹಲ್ಲೆ ಅಥವಾ ಜನಾಂಗೀಯ ಹಿಂಸೆಗೆ ಪ್ರಚೋದನೆ ನೀಡುವುದರ ವಿರುದ್ಧ ನಾವಿದ್ದೇವೆ’ ಎಂದು ಕಾರ್ಯದರ್ಶಿಗಳ ಉಪ ವಕ್ತಾರ ಫರ್ಹಾನ್ ಹಖ್ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಬಳಿಕ, ಹಲವು ಹಿಂದೂ ದೇಗುಲಗಳು ಹಾಗೂ ವ್ಯಾಪಾರ ಕಟ್ಟಡಗಳನ್ನು ಧ್ವಂಸ ಮಾಡಲಾಗಿತ್ತು. ಹಸೀನಾ ಅವರ ಅವಾಮಿ ಲೀಗ್‌ನ ಎರಡು ಹಿಂದೂ ನಾಯಕರನ್ನು ಹತ್ಯೆ ಮಾಡಲಾಗಿತ್ತು.

ಹಸೀನಾ ಅವರ ಪಲಾಯನದ ಬಳಿಕ, ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯದ ಹೆಚ್ಚಳವಾಗುತ್ತಿದೆ. ಖ್ಯಾತ ಗಾಯಕ ರಾಹುಲ್ ಅನಂದ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.