ನ್ಯೂಯಾರ್ಕ್: ಅಮೆರಿಕದ ಮೆಸಾಚುಸೆಟ್ಸ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ಮತ್ತು ಪುತ್ರಿಯ ಮೃತದೇಹಗಳು ಅವರ ಐಶಾರಾಮಿ ಬಂಗಲೆಯಲ್ಲಿ ಪತ್ತೆಯಾಗಿವೆ.
ರಾಕೇಶ್ ಕಮಲ್ (57), ಟೀನಾ (54) ಮತ್ತು ಪುತ್ರಿ ಅರಿಯಾನಾ (18) ಎಂಬವರ ಮೃತದೇಹಗಳು ಬಾಸ್ಟನ್ ಸಮೀಪದ ಡೋವರ್‌ನಲ್ಲಿರುವ ಬಂಗಲೆಯಲ್ಲಿ ಪತ್ತೆಯಾಗಿರುವುದಾಗಿ ನಾರ್ಫೋಕ್ ಡಿಸ್ಟ್ರಿಕ್ಟ್ ಅಟಾರ್ನಿ (ಡಿ.ಎ) ಮೈಕೆಲ್ ಮೊರಿಸ್ಸೆ ತಿಳಿಸಿದ್ದಾರೆ.
ಟೀನಾ ಮತ್ತು ರಾಕೇಶ್ ಅವರು ಈ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿದ ‘ಎಡುನೋವಾ’ ಎಂಬ ಕಂಪನಿ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
‘ರಾಕೇಶ್ ಅವರ ಮೃತದೇಹದ ಬಳಿ ಬಂದೂಕು ಪತ್ತೆಯಾಗಿದ್ದು. ಕೌಟುಂಬಿಕ ಕಲಹದಿಂದ ಇವರು ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಮೈಕೆಲ್ ಮೊರಿಸ್ಸೆ ತಿಳಿಸಿದ್ದಾರೆ.
ಇದೊಂದು ಕೊಲೆ ಪ್ರಕರಣವೋ ಅಥವಾ ಅತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಲಿದೆ ಎಂದೂ ವಿವರಿಸಿದ್ದಾರೆ.
ಇವರು ಅಂದಾಜು ₹41.60 ಕೋಟಿ (ಐದು ಮಿಲಿಯನ್ ಅಮೆರಿಕ ಡಾಲರ್) ಮೌಲ್ಯದ ಬಂಗಲೆಯಲ್ಲಿ ವಾಸವಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.