ADVERTISEMENT

ಬೈಡನ್‌ ಭಾಷಣಗಳನ್ನು ಹಿಂದಿಗೆ ಅನುವಾದಿಸಲು ಒತ್ತಾಯ

ಪಿಟಿಐ
Published 9 ಡಿಸೆಂಬರ್ 2022, 12:51 IST
Last Updated 9 ಡಿಸೆಂಬರ್ 2022, 12:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಶಿಂಗ್ಟನ್‌: ಅಮೆರಿಕದ ರಾಜಕೀಯದಲ್ಲಿ ಏಷ್ಯನ್‌–ಅಮೆರಿಕನ್ನರ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜೋ ಬೈಡನ್‌ ಅವರ ಭಾಷಣಗಳನ್ನು ಹಿಂದಿ ಹಾಗೂ ಏಷ್ಯಾದ ಇತರ ಹಲವು ಭಾಷೆಗಳಿಗೆ ಅನುವಾದಿಸಬೇಕೆಂದು ಅಲ್ಲಿನ ಅಧ್ಯಕ್ಷೀಯ ಆಯೋಗವು ಶ್ವೇತ ಭವನಕ್ಕೆ ಒತ್ತಾಯಿಸಿದೆ.

ಅಮೆರಿಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಭಾಷಣಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿವೆ.

ಏಷ್ಯನ್-ಅಮೆರಿಕನ್ನರು (ಎಎ), ಸ್ಥಳೀಯ ಹವಾಯಿಯನ್ನರು ಮತ್ತು ಪೆಸಿಫಿಕ್ ಐಲ್ಯಾಂಡರ್ಸ್‌ (ಎನ್‌ಎಚ್‌ಪಿಐ) ಅಧ್ಯಕ್ಷರ ಸಲಹಾ ಆಯೋಗವು ಈ ವಾರದ ತನ್ನ ಸಭೆಯಲ್ಲಿ ಈ ಶಿಫಾರಸುಗಳನ್ನು ಮಾಡಿತು. ಭಾರತ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಈ ಬಗ್ಗೆ ಪ್ರಸ್ತಾವ ಮಾಡಿದರು. ಆಯೋಗವು ಶಿಫಾರಸುಗಳನ್ನು ಅಂಗೀಕರಿಸಿತು.

ADVERTISEMENT

ಪ್ರಸ್ತಾವವನ್ನು ಸಲ್ಲಿಸಿದ ಮೂರು ತಿಂಗಳೊಳಗಾಗಿ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎಲ್ಲ ಭಾಷಣಗಳನ್ನು ಸೂಚಿಸಲಾಗಿರುವ ಇತರೆ ಭಾಷೆಗಳಿಗೆ ಅನುವಾದಿಸಬೇಕು. ಹಾಗೂ ಶ್ವೇತ ಭವನದ ವೆಬ್‌ಸೈಟ್‌ನಲ್ಲಿ ಈ ಭಾಷಣಗಳು ದೊರೆಯುವಂತೆ ಮಾಡಬೇಕು ಎಂದೂ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.